ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರಿಗೆ ನೆರವು ನೀಡುತ್ತಿದ್ದ ಕಾಶ್ಮೀರದ ಕೆಲವರ ಮನೆಗಳ ಮೇಲೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಶನಿವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಅನಂತನಾಗ್, ಸೋಪೋರ್, ಕುಲ್ಗಾಮ್, ಹಂದ್ವಾರಾದಲ್ಲಿ ಈ ದಾಳಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಹಲ್ಗಾಮ್ನ ಲಿವರ್ ಪ್ರದೇಶದಲ್ಲಿರುವ ನಿಷೇಧಿತ ಹಿಜ್ಬುಲ್ ಮುಜಾಹಿದೀನ್ಗೆ ಸೇರಿದ ಕಾರ್ಯಾಚರಣಾ ವಿಭಾಗದ ಸ್ವಘೋಷಿತ ಕಮಾಂಡರ್ ಗುಲಾಂ ನಬಿ ಅಲಿಯಾಸ್ ಆಮೀರ್ ಖಾನ್, ಹಣಕಾಸು ಮುಖ್ಯಸ್ಥ ಝಫೇರ್ ಭಟ್ಗೆ ಸೇರಿದ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ.

‘ಖಾನ್ ಹಾಗೂ ಭಟ್ 1990ರಲ್ಲೇ ಮನೆ ಬಿಟ್ಟು, ಪಾಕಿಸ್ತಾನಕ್ಕೆ ತೆರಳಿದ್ದರು. ಇದಾದ ಬಳಿಕ ಗಡಿಭಾಗ ಸೇರಿದಂತೆ ಭಾರತದ ವಿವಿಧೆಡೆ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಹಂದ್ವಾರದಲ್ಲಿಯೂ ಕೂಡ ಭಯೋತ್ಪಾದಕರಿಗೆ ನೆರವು ನೀಡಿದ ವಿವಿಧ ಮನೆಗಳ ಮೇಲೂ ದಾಳಿ ನಡೆಸಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.