ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಿಯನ್‌ ವಾಲಾ ಬಾಗ್‌: ಅಪರೂಪದ ದಾಖಲೆಗಳ ಪ್ರದರ್ಶನ

Last Updated 21 ಏಪ್ರಿಲ್ 2019, 20:01 IST
ಅಕ್ಷರ ಗಾತ್ರ

ಲಾಹೋರ್‌ (ಪಿಟಿಐ): ಜಲಿಯನ್‌ ವಾಲಾ ಬಾಗ್‌ ಹತ್ಯಾಕಾಂಡಕ್ಕೆ ಸಂಬಂಧಿಸಿದ ಅಪರೂಪದ ದಾಖಲೆಗಳನ್ನು ಪಾಕಿಸ್ತಾನ ಇದೇ ಮೊದಲ ಬಾರಿಗೆ ಪ್ರದರ್ಶಿಸಿದೆ.

ಲಾಹೋರ್‌ ಹೆರಿಟೇಜ್‌ ಮ್ಯೂಸಿಯಂನಲ್ಲಿ ಶನಿವಾರದಿಂದ ಆರಂಭವಾಗಿರುವ ದಾಖಲೆಗಳ ವಸ್ತು ಪ್ರದರ್ಶನ ಆರು ದಿನಗಳ ಕಾಲ ನಡೆಯಲಿದೆ. ಅಪರೂಪದ 70 ಐತಿಹಾಸಿಕ ದಾಖಲೆಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಅಮೃತ್‌ಸರದ ಜಲಿಯನ್‌ವಾಲಾ ಬಾಗ್‌ನಲ್ಲಿ 1919ರ ಏಪ್ರಿಲ್‌ 13ರಂದು ಈ ಹತ್ಯಾಕಾಂಡ ನಡೆದಿತ್ತು. ಅದರ ನೂರನೇ ವರ್ಷಾಚರಣೆ ಸಂದರ್ಭದಲ್ಲಿ ಪಾಕಿಸ್ಥಾನ ಈ ಪ್ರದರ್ಶನ ಏರ್ಪಡಿಸಿದೆ.

ಕ್ರಾಂತಿಕಾರಿ ನಾಯಕ ಭಗತ್‌ ಸಿಂಗ್‌ನ ವಿಚಾರಣಾ ದಾಖಲೆ ಗಳನ್ನು ಪಾಕಿಸ್ತಾನ ಕಳೆದ ವರ್ಷ ಪ್ರದರ್ಶಿಸಿತ್ತು.

ಸರ್ಕಾರ ಐತಿಹಾಸಿಕ ಘಟನೆಗಳು ಮತ್ತು ಪ್ರಸಿದ್ಧ ವ್ಯಕ್ತಿಗಳ ದಾಖಲೆಗಳನ್ನು ಸಂದರ್ಭಕ್ಕೆ ತಕ್ಕಂತೆ ಪ್ರದರ್ಶಿಸಲು ನಿರ್ಧರಿಸಿದೆ. ಈ ಮೂಲಕ ಅಂದಿನ ಘಟನೆಗಳು ಮತ್ತು ವ್ಯಕ್ತಿಗಳ ಪರಿಚಯ ಸಾರ್ವಜನಿಕರಿಗೆ ಆಗಲಿ ಎಂಬ ಉದ್ದೇಶ ಸರ್ಕಾರದ್ದು ಎಂದು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸರ್ಕಾರಿ ಪುರಾತತ್ವ ಇಲಾಖೆಯ ನಿರ್ದೇಶಕ ಅಬ್ಬಾಸ್‌ ಚೌಘ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT