ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

H3N2: ಜಾರ್ಖಂಡ್‌ನಲ್ಲಿ ಎರಡು ಪ್ರಕರಣ ಪತ್ತೆ

Last Updated 19 ಮಾರ್ಚ್ 2023, 9:44 IST
ಅಕ್ಷರ ಗಾತ್ರ

ನವದೆಹಲಿ: ಜಾರ್ಖಂಡ್‌ನಲ್ಲಿ ಇದೇ ಮೊದಲ ಬಾರಿಗೆ ಎಚ್‌3ಎನ್2 ವೈರಸ್ ಸೋಂಕಿನ ಎರಡು ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಶೀತ ಮತ್ತು ಜ್ವರದ ಲಕ್ಷಣ ಹೊಂದಿರುವ 68 ವರ್ಷದ ವೃದ್ಧೆಯಲ್ಲಿ ಶನಿವಾರ ಎಚ್‌3ಎನ್2 ಇನ್‌ಫ್ಲುಯೆಂಜಾ ವೈರಸ್ ದೃಢಪಟ್ಟಿದೆ. ಅವರನ್ನು ಗುರುವಾರ ಟಾಟಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೋಂಕು ತಗುಲಿದ ರೋಗಿಯನ್ನು ಪ್ರತ್ಯೇಕ ವಾಸದಲ್ಲಿರಿಸಿ ನಿಗಾ ವಹಿಸಲಾಗುತ್ತಿದೆ ಎಂದು ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಸಿವಿಲ್ ಸರ್ಜನ್ ಡಾ. ಜುಝಾರ್ ಮಾಂಝಿ ತಿಳಿಸಿದ್ದಾರೆ.

ರಾಂಚಿಯ ರಾಣಿ ಆಸ್ಪತ್ರೆಯಲ್ಲಿ ನಾಲ್ಕು ವರ್ಷದ ಮಗುವಿಗೆ ಎಚ್‌3ಎನ್2 ವೈರಸ್ ದೃಢಪಟ್ಟಿದೆ. ನ್ಯುಮೋನಿಯಾ ಲಕ್ಷಣದೊಂದಿಗೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಡಾ. ರಾಜೇಶ್ ಸಿಂಗ್ ತಿಳಿಸಿದ್ದಾರೆ.

ಕೋವಿಡ್ ಸೋಂಕು ಪ್ರಕರಣ ಹೆಚ್ಚಳ...
ಜಾರ್ಖಂಡ್‌ನಲ್ಲಿ ಕೋವಿಡ್ ಸೋಂಕು ಪ್ರಕರಣದಲ್ಲೂ ಹೆಚ್ಚಳ ಕಂಡುಬಂದಿದೆ. ಶನಿವಾರದಂದು ಹೊಸದಾಗಿ ಐದು ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT