ಜೈಪುರ: ಬಿಜೆಪಿ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಅವರ ಪುತ್ರ, ಶಾಸಕ ಮಾನವೇಂದ್ರ ಸಿಂಗ್ ಅವರು ಬುಧವಾರ (ಅಕ್ಟೋಬರ್ 17) ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ.

ರಾಜಸ್ಥಾನದ ವಿಧಾನಸಭೆ ಚುನಾವಣೆಯ ಈ ಸಂದರ್ಭದಲ್ಲಿ ಮಾನವೇಂದ್ರ ಅವರ ಈ ನಿರ್ಧಾರ ರಾಜಕೀಯವಾಗಿಮಹತ್ವ ಪಡೆದಿದೆ.ಬಿಜೆಪಿ ತೊರೆಯುವುದಾಗಿ ಕಳೆದ ತಿಂಗಳು ಬಾರ್ಮೇರ್‌ನಲ್ಲಿ ನಡೆದ ಸ್ವಾಭಿಮಾನ ರ‍್ಯಾಲಿಯಲ್ಲಿ ಮಾನವೇಂದ್ರ ಅವರು ಪ್ರಕಟಿಸಿದ್ದರು.

‘ಮಾನವೇಂದ್ರ ಅವರು ತಮ್ಮ ಪತ್ನಿ ಚಿತ್ರಾ ಸಿಂಗ್ ಜೊತೆಗೆ ಬುಧವಾರ ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ’ ಎಂದು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್ ತಿಳಿಸಿದ್ದಾರೆ.

‘ಮಾನವೇಂದ್ರ ಅವರ ನಿರ್ಧಾರವು ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.ರಾಜಕೀಯವಾಗಿ ಅವರು ತೆಗೆದುಕೊಂಡ ತಪ್ಪು ನಿರ್ಧಾರ ಇದು. ರಜಪೂತ ಸಮುದಾಯದ ಮತದಾರರು ಬಿಜೆಪಿ ಜೊತೆಗೇ ಇರಲಿದ್ದಾರೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ರಾಜೇಂದ್ರ ರಾಥೋಡ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.