ಚಾಯಿಬಾಸಾ: ಜಾರ್ಖಂಡ್ನ ಪಶ್ಚಿಮ ಸಿಂಹಭೂಮ್ ಜಿಲ್ಲೆಯಲ್ಲಿ ನಡೆಯುತ್ತಿರುವ ಬೃಹತ್ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ನಕ್ಸಲ್ ಸಂಘಟನೆಯ ಉನ್ನತ ನಾಯಕ ಸೇರಿದಂತೆ 15 ನಕ್ಸಲರು ಗುರುವಾರ ಹತ್ಯೆಯಾಗಿದ್ದಾರೆ.

ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ‘ಕೋಬ್ರಾ’ ಘಟಕದ 1500 ಸಿಬ್ಬಂದಿ ಮತ್ತು ಪೊಲೀಸರು ಸರಂಡಾ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನಕ್ಸಲರಿಂದ ಗುಂಡಿನ ದಾಳಿ ನಡೆದಿದೆ. ಭದ್ರತಾ ಸಿಬ್ಬಂದಿಯು ಪ್ರತಿದಾಳಿ ನಡೆಸಿದ್ದಾರೆ.

15 ನಕ್ಸಲರ ಮೃತದೇಹ ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲರ ಪ್ರಮುಖ ನಾಯಕ ಪತಿರಾಂ ಮಾಝಿ ಅಲಿಯಾಸ್ ಅನಲ್ ದಾ ಮೃತಪಟ್ಟಿದ್ದಾನೆ. 35 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ಆತನನ್ನು ಹುಡುಕಿಕೊಟ್ಟವರಿಗೆ ₹1 ಕೋಟಿ ಬಹುಮಾನ ಘೋಷಣೆಯಾಗಿತ್ತು.

ಕಾರ್ಯಾಚರಣೆ ಮಂಗಳವಾರವೇ ಆರಂಭಗೊಂಡಿದ್ದು, ಗುರುವಾರವೂ ಮುಂದುವರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.