ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ವಿಧಾನಸಭೆ: ಜಿಗ್ನೇಶ್‌‌, 14 ಕಾಂಗ್ರೆಸ್ ಶಾಸಕರ ಅಮಾನತು

Last Updated 21 ಸೆಪ್ಟೆಂಬರ್ 2022, 15:39 IST
ಅಕ್ಷರ ಗಾತ್ರ

ಗಾಂಧಿನಗರ: ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ ಕಾರಣಕ್ಕಾಗಿ ಪಕ್ಷೇತರ ಶಾಸಕ ಜಿಗ್ನೇಶ್ ಮೆವಾನಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ 14 ಶಾಸಕರನ್ನು ಗುಜರಾತ್ ವಿಧಾನಸಭೆಯಿಂದ ಬುಧವಾರ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಯಿತು.

ಸ್ಪೀಕರ್ ಅವರ ಅಮಾನತು ಆದೇಶಕ್ಕೆ ಮಣಿಯದ ಜಿಗ್ನೇಶ್ ಮತ್ತು ಕಾಂಗ್ರೆಸ್ ಶಾಸಕರನ್ನು ಮಾರ್ಷಲ್‌ಗಳ ಬಲವಂತವಾಗಿ ವಿಧಾನಸಭೆಯಿಂದ ಹೊರಹಾಕಿದರು.

ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್‌ನ ನಾಯಕ ಸುಖ್‌ರಾಮ್ ರತ್ವಾ ಅವರು ಧರಣಿನಿರತ ಸರ್ಕಾರಿ ನೌಕರರು, ರೈತರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಾಜಿ ಸೈನಿಕರ ಸಮಸ್ಯೆಗಳ ಕುರಿತು ಚರ್ಚಿಸಲು ಅರ್ಧಗಂಟೆ ವಿಶೇಷ ಚರ್ಚೆಗೆ ಒತ್ತಾಯಿಸಿದರು.

ಸ್ಪೀಕರ್ ನಿಮಾಬೆನ್ ಆಚಾರ್ಯ ಅವರು ಸುಖ್‌ರಾಮ್ ಅವರ ಬೇಡಿಕೆಯನ್ನು ನಿರಾಕರಿಸಿದರು. ಆಗ ಜಿಗ್ನೇಶ್ ಮೆವಾನಿ ಮತ್ತು ಇತರ ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿದರು.

ತಮ್ಮ ಸ್ಥಾನಗಳಿಗೆ ಮರಳುವಂತೆ ಸ್ಪೀಕರ್ ನಿರ್ದೇಶನ ನೀಡಿದರೂ ಜಿಗ್ನೇಶ್ ಮತ್ತು ಕಾಂಗ್ರೆಸ್ ಶಾಸಕರು ನಿರಾಕರಿಸಿದರು. ಆಗ ಬಹುಮತದೊಂದಿಗೆ ಮೆವಾನಿ ಮತ್ತು 14 ಕಾಂಗ್ರೆಸ್ ಶಾಸಕರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT