ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಜೋಯ್‌ ಅಲುಕಾಸ್‌ನಿಂದ 250 ಮನೆ, ಜಿಆರ್‌ಟಿಯಿಂದ ₹50 ಲಕ್ಷ ನೆರವು

Last Updated 15 ಸೆಪ್ಟೆಂಬರ್ 2018, 18:11 IST
ಅಕ್ಷರ ಗಾತ್ರ

ತ್ರಿಶ್ಶೂರ್‌: ಕೇರಳದಲ್ಲಿ ಪ್ರವಾಹದಿಂದ ನಿರಾಶ್ರಿತರಾಗಿರುವವರಿಗೆ ಜೋಯ್‌ ಅಲುಕಾಸ್‌ ಸಮೂಹವು 250 ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಿದೆ. ಈ ಮೆಗಾ ಪ್ರಾಜೆಕ್ಟ್‌ಗಾಗಿ 15 ಕೋಟಿ ವೆಚ್ಚ ಮಾಡಲಿದೆ.

‘ನಿರಾಶ್ರಿತರು ತಮ್ಮ ಸಮೀಪ ಇರುವ ಜೋಯ್‌ ಅಲುಕಾಸ್‌ ಮಳಿಗೆಗಳಲ್ಲಿ ಮನೆಗಾಗಿ ಅರ್ಜಿ ಸಲ್ಲಿಸಬಹುದು. ಜೋಯ್‌ ಅಲುಕಾಸ್‌ ಫೌಂಡೇಷನ್‌ ರಚಿಸಿರುವ ಸಮಿತಿಯು, ಸ್ಥಳೀಯ ಆಡಳಿತದ ನೆರವಿನಿಂದ ಈ ರ್ಜಿಗಳನ್ನು ಪರಿಶೀಲನೆ ನಡೆಸಲಿದೆ. ಬಳಿಕ ಅರ್ಹ ಅಭ್ಯರ್ಥಿಗಳಿಗೆ ಮನೆ ನಿರ್ಮಿಸಿಕೊಡಲಾಗುವುದು’ ಎಂದು ಸಮೂಹದ ಅಧ್ಯಕ್ಷ ಜೋಯ್‌ ಅಲುಕಾಸ್‌ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗೆ: 0487 2329222

ಜಿಆರ್‌ಟಿಯಿಂದ ₹50 ಲಕ್ಷ ನೆರವು

ಬೆಂಗಳೂರು: ಕೇರಳದಲ್ಲಿನ ಪ್ರವಾಹ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಜಿಆರ್‌ಟಿ ಜುವೆಲರ್ಸ್‌ ಕಂಪನಿಯು ಮುಖ್ಯಮಂತ್ರಿ ಪರಿಹಾರ ನಿಧಿಗೆ ₹50 ಲಕ್ಷ ನೀಡಿದೆ.

ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಆರ್‌. ಅನಂತ್ ಮತ್ತು ಜಿ.ಆರ್‌. ರಾಧಾಕೃಷ್ಣನ್‌ ಅವರು ಮುಖ್ಯಮಂತ್ರಿ ಪಿಣರಾಯ್ ವಿಜಯನ್‌ ಅವರಿಗೆ ಚೆಕ್‌ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT