ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳಿಂದ ನ್ಯಾಯಾಧೀಶರು ಪ್ರಭಾವಿತರಾಗರು: ನ್ಯಾಯಮೂರ್ತಿ ಪ್ರಕಾಶ್ ನಾಯ್ಕ್‌

Published 7 ಅಕ್ಟೋಬರ್ 2023, 9:14 IST
Last Updated 7 ಅಕ್ಟೋಬರ್ 2023, 9:14 IST
ಅಕ್ಷರ ಗಾತ್ರ

ಪಣಜಿ: ‘ಯಾವುದೇ ಪ್ರಕರಣವನ್ನು ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ನೀಡಿದಲ್ಲಿ ಅದು ನ್ಯಾಯಾಂಗದ ಗಮನ ಸೆಳೆಯಲು ಸಾಧ್ಯ ಎಂಬ ಭಾವನೆ ಜನರಲ್ಲಿದೆ. ಆದರೆ ವಾಸ್ತವದಲ್ಲಿ ನ್ಯಾಯಾಧೀಶರು ಮಾಧ್ಯಮಗಳಿಂದ ಪ್ರಭಾವಿತರಾಗುವುದಿಲ್ಲ’ ಎಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಪ್ರಕಾಶ್ ಡಿ. ನಾಯ್ಕ್‌ ಹೇಳಿದರು.

ಗೋವಾದ ಮಡಗಾಂವ್‌ನಲ್ಲಿರುವ ಜಿ.ಆರ್.ಕಾರೆ ಕಾನೂನು ಕಾಲೇಜು ಆಯೋಜಿಸಿದ್ದ ‘ಜಿಆರ್‌ಕೆ– ಜುಡಿಷಿಯರಿ ಟಾಕ್ಸ್‌’ ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಮಾಧ್ಯಮ ವಿಚಾರಣೆ’ ಕುರಿತ ತಮ್ಮ ಅಬಿಪ್ರಾಯನ್ನು ಹೇಳಿದ ನ್ಯಾ. ನಾಯ್ಕ್‌, ‘ಮಾಧ್ಯಮ ವಿಚಾರಣೆ ಎಂಬ ಸಂಗತಿ ಇದೆ ಎಂದು ಸದಾ ಹೇಳಲಾಗುತ್ತದೆ. ಆದರೆ ಮಾಧ್ಯಮಗಳ ಪ್ರಭಾವ ನ್ಯಾಯಾಧೀಶರ ಮೇಲೆ ಆಗುವುದಿಲ್ಲ ಎಂದು ಹೇಳಲಾರೆ. ನಾನು ಅದನ್ನು ಹೇಳಿದರೂ, ಮಾಧ್ಯಮಗಳ ವರದಿ ಆಧರಿಸಿ ತೀರ್ಪು ಬರೆಯಲಾಗುತ್ತದೆಯೇ ಎಂದು ನೀವು ಮರಳಿ ಪ್ರಶ್ನೆ ಕೇಳುತ್ತೀರಿ’ ಎಂದರು.

‘ಆದರೆ ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯೊಬ್ಬ ಮಾಡಿರಬಹುದಾದ ಅಪರಾಧವನ್ನು ಮಾಧ್ಯಮಗಳು ತೀವ್ರವಾಗಿ ಪ್ರಚಾರ ಮಾಡುತ್ತಿವೆ. ಇಷ್ಟು ಮಾತ್ರವಲ್ಲ, ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುವ ಮೊದಲೇ, ಮಾಧ್ಯಮಗಳು ತಮ್ಮ ತೀರ್ಪು ನೀಡುವುದನ್ನು ರೂಢಿಸಿಕೊಂಡಿವೆ. ಮಾಧ್ಯಮಗಳು ಈ ಹಂತಕ್ಕೆ ಎಂದೂ ಹೋಗಬಾರದು. ಕೆಲವೊಮ್ಮೆ ನ್ಯಾಯಾಲಯದ ಮೆಟ್ಟಿಲೇರುವ ಮೊದಲೇ ಸಾಕ್ಷಿಗಳು ಮಧ್ಯ ಪ್ರವೇಶಿಸಿರುವ ಉದಾಹರಣೆಗಳೂ ಇವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಹೀಗಾಗಿ ಮಾಧ್ಯಮ ವಿಚಾರಣೆ ಎಂಬುದು ಕಾನೂನಿನ ವಿಚಾರಣೆಗೆ ತಿವ್ರವಾಗಿ ತೊಡಕಾಗಿದೆ. ನನ್ನ ವಿಚಾರದಲ್ಲಿ ನಾನು ಸದಾ ಸತ್ಯಕ್ಕೆ ಹೆಚ್ಚು ಮಹತ್ವ ನೀಡುತ್ತೇನೆ. ನ್ಯಾಯಪೀಠದ ಮುಂದೆ ಬರುವ ಸಾಕ್ಷಗಳನ್ನು ಪರಿಗಣಿಸಿ, ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣವನ್ನು ಸಾಭೀತುಪಡಿಸಲು ಮಂಡಿಸುವ ವಾದವನ್ನು ಆಲಿಸಿಯೇ ಪ್ರತಿಯೊಬ್ಬ ನ್ಯಾಯಾಧೀಶರು ತಮ್ಮ ತೀರ್ಪು ನೀಡಬೇಕು’ ಎಂದು ನ್ಯಾ. ನಾಯ್ಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT