ಚೆನ್ನೈ: ಇಲ್ಲಿರುವ ಅಮೆರಿಕ ಕಾನ್ಸಲ್ಜನರಲ್ ಕಚೇರಿಯ ಮುಖ್ಯಸ್ಥೆಯಾಗಿ ಜುಡಿತ್ ರವಿನ್ ಅವರು ಭಾನುವಾರ ಅಧಿಕಾರ ವಹಿಸಿಕೊಂಡರು.

ಈ ಮೊದಲು ಪೆರುವಿನಲ್ಲಿ ಅಮೆರಿಕ ದೂತಾವಾಸ ಕಚೇರಿಯ ಸಾರ್ವಜನಿಕ ವ್ಯವಹಾರಗಳನ್ನು ಜುಡಿತ್ ನೋಡಿಕೊಳ್ಳುತ್ತಿದ್ದರು.

‘ಕೋವಿಡ್‌ನಿಂದ ಎದುರಾಗಿರುವ ಕಷ್ಟದ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕವನ್ನು ಪ್ರತಿನಿಧಿಸುವುದು ಗೌರವದ ವಿಚಾರ’ ಎಂದು ಜುಡಿತ್ ಹೇಳಿದ್ದಾರೆ. ಚೆನ್ನೈ ಕಾನ್ಸಲ್ ಜನರಲ್ ಕಚೇರಿಯು ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಅಂಡಮಾನ್ ನಿಕೋಬಾರ್ ದ್ವೀಪ, ಲಕ್ಷದ್ವೀಪ ಮತ್ತು ಪುದುಚೇರಿ ವ್ಯಾಪ್ತಿಯನ್ನು ಒಳಗೊಂಡಿದೆ.

ಜುಡಿತ್ ಅವರು ಹೈಟಿಯಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯಾಗಿರುವ ಅವರು ಪಾಕಿಸ್ತಾನ, ಸುಡಾನ್, ಮೆಕ್ಸಿಕೊ ಮೊದಲಾದ ಕಡೆ ವಿವಿಧ ರಾಜತಾಂತ್ರಿಕ ಹುದ್ದೆಗಳಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.