ಪುಣೆ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಕಾನೂನಿನ ಎದುರು ಸಂಘರ್ಷಕ್ಕೆ ಒಳಪಟ್ಟ 17 ವರ್ಷದ ಬಾಲಕನನ್ನು ವಯಸ್ಕನೆಂದು ಪರಿಗಣಿಸಲು ಕೋರಿದ್ದ ಪುಣೆ ನಗರ ಪೊಲೀಸರ ಮನವಿಯನ್ನು ಬಾಲ ನ್ಯಾಯ ಮಂಡಳಿಯು (ಜೆಜೆಬಿ) ಮಂಗಳವಾರ ತಿರಸ್ಕರಿಸಿದೆ.

ಕಳೆದ ವರ್ಷ ಮೇ ನಲ್ಲಿ ಪುಣೆಯ ಕಲ್ಯಾಣಿ ನಗರದ ಸಮೀಪ ಪಾನಮತ್ತ ಸ್ಥಿತಿಯಲ್ಲಿದ್ದ ಬಾಲಕ ಚಲಾಯಿಸುತ್ತಿದ್ದ ಪೋಶೆ ಕಾರು ಡಿಕ್ಕಿ ಹೊಡೆದು ಇಬ್ಬರು ಟೆಕಿಗಳು ಮೃತಪಟ್ಟಿದ್ದರು.

ಬಾಲ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆ–2015ರ ವಿವಿಧ ಸೆಕ್ಷನ್ ಉಲ್ಲೇಖಿಸಿ ಪುಣೆ ಪೊಲೀಸರು ಮಂಡಳಿಯಲ್ಲಿ ಈ ಅರ್ಜಿ ಸಲ್ಲಿಸಿದ್ದರು. ಇಬ್ಬರನ್ನು ಹತ್ಯೆ ಮಾಡಿ ಹೀನ ಕೃತ್ಯ ಎಸಗಿರುವುದು ಮಾತ್ರವಲ್ಲದೆ, ಸಾಕ್ಷ್ಯನಾಶಕ್ಕೂ ಯತ್ನಿಸಿದ್ದಾನೆ ಎಂದು ಪೊಲೀಸರು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.