ನವದೆಹಲಿ: ರಾಜ್ಯಸಭೆಯಕಾಂಗ್ರೆಸ್ ಸದಸ್ಯ ಕೆ.ಸಿ. ರಾಮಮೂರ್ತಿಸದಸ್ಯತ್ವಕ್ಕೆ ಬುಧವಾರರಾಜೀನಾಮೆ ನೀಡಿದ್ದಾರೆ.ಬಿಜೆಪಿ ಸೇರಿಕೊಳ್ಳುವ ಉದ್ದೇಶದಿಂದ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಉಪರಾಷ್ಷ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ರಾಮಮೂರ್ತಿ ರಾಜೀನಾಮೆ ಸಲ್ಲಿಸಿದರು.ನಿವೃತ್ತ ಐಪಿಎಸ್ ಅಧಿಕಾರಿ ರಾಮಮೂರ್ತಿ ಅವರನ್ನು 2016ರಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಿಂದ ಇವರನ್ನು ರಾಜ್ಯಸಭೆಗೆ ನೇಮಕ ಮಾಡಿತ್ತು.

ಕಾಂಗ್ರೆಸ್‌ಗೂ ರಾಜೀನಾಮೆ ನೀಡಿದ್ದೇನೆ: ರಾಮಮೂರ್ತಿ

‘ನಾನು ರಾಜ್ಯಸಭೆ ಸದಸ್ಯತ್ವಕ್ಕೆ ಮಾತ್ರವಲ್ಲ,ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇನೆ.ರಾಜೀನಾಮೆ ಬಗ್ಗೆ ಸೋನಿಯಗಾಂಧಿ ಅವರ ಗಮನಕ್ಕೆ ತಂದಿದ್ದೇನೆ’ ಎಂದು ರಾಮಮೂರ್ತಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ‘ಇದು ತಕ್ಷಣಕ್ಕೆ ತೆಗೆದುಕೊಂಡಿರುವ ನಿರ್ಧಾರ ಅಲ್ಲ.ಒಂದು ವರ್ಷಕ್ಕೂಹೆಚ್ಚು ಸಮಯ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇನೆ.ಈ ಬಗ್ಗೆ ಹಿಂದೆಯೇ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದೆ.ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ’ ಎಂದರು.

‘ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವ ದೃಷ್ಟಿಯಿಂದ ರಾಜೀನಾಮೆ ನೀಡಿದ್ದೇನೆ.ನನ್ನ ಅನುಭವವನ್ನು ಕಾಂಗ್ರೆಸ್ ಪಕ್ಷವು ಸಮರ್ಪಕವಾಗಿ ಬಳಸಿಕೊಂಡಿಲ್ಲ.ಬಿಜೆಪಿ ಸೇರುವ ಬಗ್ಗೆ ನನಗೆ ಒಲವು ಇದೆ. ನನ್ನ ಅನುಭವವನ್ನು ಅವರುಸಮರ್ಪಕವಾಗಿ ಬಳಸಿಕೊಳ್ಳುವುದಾದರೆ ಮಾತ್ರ ನಾನು ಬಿಜೆಪಿ ಸೇರಲು ಸಿದ್ಧ’ ಎಂದರು.

‘ಅಮಿತ್ ಶಾ ಅವರನ್ನು ಹಿಂದೆ ಹಲವುಕಾರಣಗಳಿಗಾಗಿಭೇಟಿ ಮಾಡಿದ್ದೇನೆ.ಬಿಜೆಪಿ ಕೆಲ ನಾಯಕರನ್ನು ಭೇಟಿ ಮಾಡಿದ್ದೆ.ಬಿಜೆಪಿ ಪಕ್ಷ ಸೇರುವ ಬಗ್ಗೆ ಇನ್ನೂ ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಬಿಜೆಪಿ ಸೇರುವ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ನಾನು ಯಾವುದೇ ಆಮಿಷಗಳಿಗೆ ಬಲಿಯಾಗಿಲ್ಲ. ರಾಜೀನಾಮೆ ನೀಡಲು ಯಾವುದೇ ಬೆದರಿಕೆಗಳು ಕಾರಣವಲ್ಲ’ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.