ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳೇಶ್ವರಂ ಯೋಜನೆ ಕೆಸಿಆರ್ ಅವರ ಎಟಿಎಂ: ರಾಹುಲ್ ಗಾಂಧಿ

ತೆಲಂಗಾಣದ ಕಾಳೇಶ್ವರಂ ನೀರಾವರಿ ಯೋಜನೆಯ ಭಾಗವಾಗಿರುವ ಮೇಡಿಗಡ್ಡ ಬ್ಯಾರೇಜ್‌ಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Published 2 ನವೆಂಬರ್ 2023, 8:02 IST
Last Updated 2 ನವೆಂಬರ್ 2023, 8:02 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಅವರ ಕುಟುಂಬ ರಾಜ್ಯದ ಜನರ ಲೂಟಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ತೆಲಂಗಾಣದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, 'ಕಾಳೇಶ್ವರಂ ಏತ ನೀರಾವರಿ ಯೋಜನೆ ಕುರಿತು ಪ್ರಸ್ತಾಪಿಸಿದರು. ಕಾಳೇಶ್ವರಂ ಯೋಜನೆಯನ್ನು ಸಿಎಂ ಕೆಸಿಆರ್‌ ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ತೆಲಂಗಾಣ ಜನತೆಯಿಂದ ₹ 1 ಲಕ್ಷ ಕೋಟಿ ದೋಚಲಾಗಿದೆ. ಈ ನೀರಾವರಿ ಯೋಜನೆಯಿಂದ ಯಾರಿಗೂ ಪ್ರಯೋಜನವಾಗಿಲ್ಲ. ಕಾಳೇಶ್ವರಂ ಯೋಜನೆ ಬಿಆರ್‌ಎಸ್‌ನ ಎಟಿಎಂ ಎನ್ನುವ ಬದಲು ಕಾಲೇಶ್ವರಂ ಕೆಸಿಆರ್‌ನ ಎಟಿಎಂ ಎಂಬ ನಮ್ಮ ಕಾರ್ಯಕರ್ತರ ಹೇಳಿಕೆ ನಿಜವೇ ಆಗಿದೆ ಎಂದರು.

ಬಳಿಕ ರಾಹುಲ್ ಗಾಂಧಿ ಮೇಡಿಗಡ್ಡ ಬ್ಯಾರೇಜ್‌ಗೆ ಭೇಟಿ ನೀಡಿದರು. ‘ತೆಲಂಗಾಣದ ಕಾಳೇಶ್ವರಂ ಯೋಜನೆಯ ಭಾಗವಾಗಿರುವ ಮೇಡಿಗಡ್ಡ ಬ್ಯಾರೇಜ್‌ಗೆ ನಾನು ಭೇಟಿ ನೀಡಿದ್ದೇನೆ, ಕಳಪೆ ಕಾಮಗಾರಿಯಿಂದಾಗಿ ಪಿಲ್ಲರ್‌ಗಳು ಮುಳುಗುತ್ತಿವೆ. ಹಲವು ಪಿಲ್ಲರ್‌ಗಳಲ್ಲಿ ಬಿರುಕು ಉಂಟಾಗಿದೆ‘ ಎಂದು ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ರೇವಂತ್ ರೆಡ್ಡಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಭಟ್ಟಿ ವಿಕ್ರಮಾರ್ಕ ಮತ್ತು ಇತರ ಕಾಂಗ್ರೆಸ್ ಮುಖಂಡರು ಮೇಡಿಗಡ್ಡ ಬ್ಯಾರೇಜ್‌ಗೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT