ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ಹಯ್ಯ ಕುಮಾರ್ ನಿರುದ್ಯೋಗಿ, ಆಸ್ತಿ ₹8.5 ಲಕ್ಷ

Last Updated 10 ಏಪ್ರಿಲ್ 2019, 15:47 IST
ಅಕ್ಷರ ಗಾತ್ರ

ಪಟ್ನಾ: ಜೆಎನ್‍ಯು ವಿದ್ಯಾರ್ಥಿ ಸಂಘಟನೆಗಳ ಮಾಜಿ ಅಧ್ಯಕ್ಷ, ಯುವ ನೇತಾರ ಕನ್ಹಯ್ಯ ಕುಮಾರ್ ಸಿಪಿಐ ಅಭ್ಯರ್ಥಿಯಾಗಿ ಬೆಗುಸರೈಯಿಂದ ಕಣಕ್ಕಿಳಿದ್ದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರ ಸಲ್ಲಿಸಿರುವ ಕನ್ಹಯ್ಯ,ಕಳೆದ ಎರಡು ವರ್ಷಗಳ ಆದಾಯ ₹8.5 ಲಕ್ಷ ಎಂದು ನಮೂದಿಸಿದ್ದಾರೆ.

ನಿರುದ್ಯೋಗಿಯಾಗಿರುವ ಕನ್ಹಯ್ಯ ವಿರುದ್ದ 5 ಪ್ರಕರಣಗಳಿವೆ ಎಂದು ಅಫಿಡವಿಟ್‍ನಲ್ಲಿ ಹೇಳಲಾಗಿದೆ.ಹವ್ಯಾಸಿ ಬರಹಗಾರನಾಗಿಯೂ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅತಿಥಿ ಉಪನ್ಯಾಸಕನಾಗಿಯೂ ತಾನು ದುಡಿದಿದ್ದೇನೆ ಎಂದು ಹೇಳಿರುವ ಕನ್ಹಯ್ಯ, ಬಿಹಾರ್ ಟು ತಿಹಾರ್ ಎಂಬ ಪುಸ್ತದ ಮಾರಾಟದಿಂದ ತನಗೆ ಆದಾಯ ಸಿಗುತ್ತಿದೆ ಎಂದಿದ್ದಾರೆ.

ಕೈಯಲ್ಲಿ ₹24,000 ನಗದು , ಬ್ಯಾಂಕ್ ಖಾತೆಯಲ್ಲಿ ₹3,57, 848 ಠೇವಣಿ ಹೊಂದಿರುವ ಈತನಿಗೆ ಸ್ವಂತವಾಗಿ ಕೃಷಿ ಭೂಮಿ ಇಲ್ಲ , ಅಪ್ಪ ರೈತ ಮತ್ತು ಅಮ್ಮ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ ಎಂದು ಅಫಿಡವಿಟ್‍ನಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT