ಮಂಗಳೂರು: ‘ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ(ತಿದ್ದುಪಡಿ) ಮಸೂದೆಯು (ಸಿಎಬಿ) ಪ್ರಜಾಪ್ರಭುತ್ವಕ್ಕೆ ಸವಾಲಾಗಿರುವುದು ಮಾತ್ರವಲ್ಲ, ಅಸಾಂವಿಧಾನಿಕ ಮತ್ತು ಅಮಾನವೀಯವಾಗಿವೆ’ ಎಂದು ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಹೇಳಿದ್ದಾರೆ.

ನಗರದ ಎಸ್‌ಡಿಎಂ ಕಾನೂನು ಕಾಲೇಜು ಮಂಗಳವಾರ ಆಯೋಜಿಸಿದ್ದ ಮಾನವ ಹಕ್ಕುಗಳ ದಿನ ‘ಹ್ಯುಮಾನೋ 2ಕೆ19’ ಆಚರಣೆಯಲ್ಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಯಾರಾದರೂ ಅಕ್ರಮ ವಲಸಿಗರು ಎಂದು ಸರ್ಕಾರಕ್ಕೆ ಹೇಗೆ ಗೊತ್ತಾಗುತ್ತದೆ? ಅದನ್ನು ಸಾಬೀತುಪಡಿಸಲು 50 ವರ್ಷಕ್ಕಿಂತ ಹಳೆಯದಾದ ದಾಖಲೆಗಳು ಬೇಕಾಗುತ್ತವೆ. ಹಾಗಿದ್ದರೆ, ದಾಖಲೆ ಗಳನ್ನು ಹೊಂದಿರದ ಜನರನ್ನು ನಾವು ಹೊರಗೆ ಕಳುಹಿಸಬೇಕೇ? ಇದನ್ನೇ ಎನ್‌ಆರ್‌ಸಿ ಮಾಡುತ್ತಿದೆ’ ಎಂದು ಟೀಕಿಸಿದರು.

‘ತಾನು ಭಾರತೀಯ ಪ್ರಜೆ ಎಂದು ಸಾಬೀತುಪಡಿಸುವ ಸಲುವಾಗಿ ದಾಖಲೆಗಳನ್ನು ಸಂಗ್ರಹಿಸುವ ಸಾಹಸವು, ದೇಶದ ಆರ್ಥಿಕತೆಗೆ ಹೊಡೆತ ನೀಡುತ್ತದೆ. ತಾವು ‘ಭಾರತೀಯರು’ ಎಂದು ಸಾಬೀತುಪಡಿಸಲು ಸಾಕಷ್ಟು ಮಾನಸಿಕ ಕಿರುಕುಳ ಪಡಬೇಕಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಡವರು, ಆದಿವಾಸಿಗಳು, ಮಹಿಳೆಯರು, ಭೂ ರಹಿತರು ಎನ್‌ಆರ್‌ಸಿಗೆ ತುತ್ತಾಗಲಿದ್ದಾರೆ. ಒಬ್ಬ ವ್ಯಕ್ತಿಯ ಪೌರತ್ವವನ್ನು ತೆಗೆದು ಹಾಕಲು ಸರ್ಕಾರಕ್ಕೆ ಹಕ್ಕಿಲ್ಲ

-ಕಣ್ಣನ್ ಗೋಪಿನಾಥನ್, ಮಾಜಿ ಐಎಎಸ್ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.