ಶ್ರೀನಗರ:‘ಕಾಶ್ಮೀರದಲ್ಲಿ 240ರಿಂದ 250 ಉಗ್ರರು ಸಕ್ರಿಯರಾಗಿದ್ದಾರೆ’ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ದಿಲ್‌ಬಾಗ್ ಸಿಂಗ್ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಕಾಶ್ಮೀರಲ್ಲಿ ಉಗ್ರರ ಸಂಖ್ಯೆ ಕಡೆಮೆ ಆಗಿದೆ. ಉಗ್ರರ ಒಳನುಸುಳುವಿಕೆಯೂ ಕಡಿಮೆಯಾಗಿದೆ. ಈ ವರ್ಷ ಇಲ್ಲಿಯವರೆಗೆ ಕೇವಲ ಮೂವರು ಉಗ್ರರು ಅಂತರರಾಷ್ಟ್ರೀಯ ಗಡಿ ಮೂಲಕ ದೇಶದ ಒಳನುಸುಳಿದ್ದಾರೆ’ ಎಂದರು.

‘ಈ ವರ್ಷದ ಮೊದಲೆರೆಡು ತಿಂಗಳಿನಲ್ಲಿ ಭದ್ರತಾ ಪಡೆಗಳುಕಾಶ್ಮೀರ ಕಣಿವೆಯಲ್ಲಿ 10 ಮತ್ತು ಜಮ್ಮುವಿನಲ್ಲಿ 2 ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿವೆ. ಇಲ್ಲಿ ಸುಮಾರು 25 ಉಗ್ರರನ್ನು ಹತ್ಯೆ ಮಾಡಲಾಗಿದೆ’ ಎಂದರು.

ಎಲ್‌ಇಟಿಯ ಇಬ್ಬರು ಉಗ್ರರ ಹತ್ಯೆ
ಅನಂತ್‌ನಾಗ್ ಜಿಲ್ಲೆಯಲ್ಲಿ ಲಷ್ಕರ್ ಎ ತೊಯಬಾ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಸ್ಥಳೀಯ ಉಗ್ರರನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಶುಕ್ರವಾರ ರಾತ್ರಿ ಹತ್ಯೆ ಮಾಡಿವೆ. ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಕೈಗೊಂಡ ಸೇನೆ, ಪೊಲೀಸರು ಮತ್ತು ಉಗ್ರರ ನಡುವೆ ಗುಂಡಿನ ದಾಳಿ ನಡೆಯಿತು. ನವೀದ್ ಭಟ್ ಅಲಿಯಾಸ್ ಫಾರುಕ್ ಮತ್ತು ಅಕಿಬ್ ಯಾಸೀನ್ ಭಟ್ ಎಂಬ ಉಗ್ರರು ಹತ್ಯೆಯಾದರು’ ಎಂದು ದಿಲ್‌ಬಾಗ್ ಸಿಂಗ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.