ನವದೆಹಲಿ: ಪತ್ನಿಯ ಮೂಲಕ ಅಮೆರಿಕದಲ್ಲಿ ಅಪ್ರಾಪ್ತ ವಯಸ್ಕರನ್ನು ಶೋಷಿಸುತ್ತಿದ್ದ ಕಾಶ್ಮೀರದ ವ್ಯಕ್ತಿಯೊಬ್ಬರನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮಂಗಳವಾರ ಬಂಧಿಸಿದೆ.

‘ಆರೋಪಿಯು ಹಣದ ಆಸೆಗಾಗಿ ಡಾರ್ಕ್ ವೆಬ್‌ನಲ್ಲಿ ಅಶ್ಲೀಲ ವಿಡಿಯೊ ಹಾಗೂ ಚಿತ್ರಗಳನ್ನು ಅಪ್‌ಲೋಡ್ ಮಾಡುತ್ತಿದ್ದ. ಅಮೆರಿಕದಲ್ಲಿರುವ ಅನೇಕ ಅಪ್ರಾಪ್ತ ವಯಸ್ಕರೊಂದಿಗೆ ನೇರ ಸಂಪರ್ಕದಲ್ಲೂ ಇದ್ದ. ಭಾರತದಲ್ಲಿ ನೆಲೆಸಿರುವ ವಂಚಕರ ಪಡೆಯು ಆನ್‌ಲೈನ್ ಮೂಲಕ ಅಮೆರಿಕದಲ್ಲಿರುವ ಅಪ್ರಾಪ್ತರನ್ನು ಶೋಷಿಸುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಕುರಿತು ತನಿಖೆ ನಡೆಸುತ್ತಿರುವಾಗ ಕಾಶ್ಮೀರದ ವ್ಯಕ್ತಿಯ ಕೃತ್ಯ ಬಯಲಾಗಿದೆ’ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

‘ಆರೋಪಿಯ ಪತ್ನಿಯು ವಾಷಿಂಗ್ಟನ್‌ನಲ್ಲಿ ನೆಲೆಸಿದ್ದಾರೆ. ಈತನ ನಿರ್ದೇಶನದ ಮೇರೆಗೆ ಅಪ್ರಾಪ್ತರ ವಿಡಿಯೊ ಚಿತ್ರೀಕರಿಸುತ್ತಿದ್ದ ಆಕೆ ಬಳಿಕ ಆನ್‌ಲೈನ್ ಮೂಲಕ ಅವುಗಳನ್ನು ಆರೋಪಿಗೆ ಕಳುಹಿಸುತ್ತಿದ್ದಳು’ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.