ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಣ್ಣೂರಿನಲ್ಲಿ ಕೇರಳದ 4ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶುರು

ದೇಶದಲ್ಲೇ ಅತಿಹೆಚ್ಚು ಅಂತರರಾಷ್ಟ್ರೀಯ ವಿಮಾನ ನಿಲ್ಧಾಣ ಹೊಂದಿದ ಖ್ಯಾತಿ
Last Updated 9 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಕಣ್ಣೂರು: ಕೇರಳ ರಾಜ್ಯವು ದೇಶದಲ್ಲಿ ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದ ಖ್ಯಾತಿ ಪಡೆದುಕೊಂಡಿದೆ.

ತಿರುವನಂತಪುರ, ಕೊಚ್ಚಿ, ಕೋಯಿಕ್ಕೋಡ್ ಬಳಿಕ ಇದೀಗ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಲೋಕಾರ್ಪಣೆಗೊಂಡಿದೆ.

ಭಾನುವಾರ ಮೊದಲ ವಿಮಾನ ಹಾರಾಟ ನಡೆಸುವ ಮೂಲಕ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಾಲನೆ ಸಿಕ್ಕಿತು. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಏರ್ ಇಂಡಿಯಾ ವಿಮಾನ ಹಾರಾಟಕ್ಕೆ ಹಸಿರುನಿಶಾನೆ ತೋರಿಸಿದರು. 186 ಪ್ರಯಾಣಿಕರನ್ನು ಹೊತ್ತು ವಿಮಾನವು ಅಬುಧಾಬಿಗೆ ಪ್ರಯಾಣ ಬೆಳೆಸಿತು.

ರಾಜ್ಯದ ಕನಸಿನ ಯೋಜನೆಗೆ ಬೆಂಬಲ ನೀಡಿದ ಸುರೇಶ್ ಪ್ರಭು ಅವರಿಗೆ ಪಿಣರಾಯಿ ವಿಜಯನ್ ಧನ್ಯವಾದ ಹೇಳಿದರು. ಮಾಜಿ ಮುಖ್ಯಮಂತ್ರಿ ಇ.ಕೆ ನಾಯನಾರ್, ಉದ್ಯಮಿ ಕೃಷ್ಣನ್ ನಾಯರ್ ಅವರ ನೆರವನ್ನೂ ಸ್ಮರಿಸಿದರು.

ಕಾರ್ಯಕ್ರಮವನ್ನು ಪ್ರತಿಪಕ್ಷ ಯುಡಿಎಫ್ ಹಾಗೂ ಬಿಜೆಪಿ ಬಹಿಷ್ಕರಿಸಿದ್ದವು. ಮಾಜಿ ಮುಖ್ಯಮಂತ್ರಿ ಉ‌ಮ್ಮನ್ ಚಾಂಡಿ ಅವರಿಗೆ ಅಹ್ವಾನ ನೀಡದ್ದಕ್ಕೆ ಯುಡಿಎಫ್ ಮುನಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT