ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಳೆಯಿಂದ ಕೇರಳಕ್ಕೆ ₹ 31,000 ಕೋಟಿ ನಷ್ಟ

ರಾಜ್ಯ ಸರ್ಕಾರಕ್ಕೆ ಅಧ್ಯಯನ ವರದಿ ಹಸ್ತಾಂತರಿಸಿದ ವಿಶ್ವಸಂಸ್ಥೆ l ನೆರವಿನ ಭರವಸೆ
Last Updated 26 ಅಕ್ಟೋಬರ್ 2018, 19:07 IST
ಅಕ್ಷರ ಗಾತ್ರ

ತಿರುವನಂತಪುರ:ಆಗಸ್ಟ್‌ನಲ್ಲಿನ ಮಹಾಮಳೆ ಮತ್ತು ಪ್ರವಾಹದಿಂದ ಕೇರಳಕ್ಕೆ ₹ 31,000 ಕೋಟಿಯಷ್ಟು ಹಾನಿಯಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಈ ವಿಕೋಪದ ನಂತರ ರಾಜ್ಯದ ಮರುನಿರ್ಮಾಣಕ್ಕೆ ಅಗತ್ಯವಿರುವ ಹಣ, ನೀತಿಗಳು ಮತ್ತು ಯೋಜನೆಗಳ ಬಗ್ಗೆ ವಿಶ್ವಸಂಸ್ಥೆಯು ಅಧ್ಯಯನ ನಡೆಸಿದೆ. ಈ ಅಧ್ಯಯನದ ವರದಿಯನ್ನುಭಾರತಕ್ಕೆ ವಿಶ್ವಸಂಸ್ಥೆಯ ಸಂಯೋಜನಾಧಿಕಾರಿ ಯೂರಿ ಅಫನಾಸೀವ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹಸ್ತಾಂತರಿಸಿದ್ದಾರೆ.

‘ಮರುನಿರ್ಮಾಣದಲ್ಲಿ ಕೇರಳಕ್ಕೆ ವಿಶ್ವಸಂಸ್ಥೆಯಿಂದ ಹಣಕಾಸು ಮತ್ತು ವಿಶ್ವದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒದಗಿಸಲಾಗುತ್ತದೆ ಎಂದು ಯೂರಿ ಅವರು ವಿಜಯನ್ ಅವರಿಗೆ ತಿಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ವರದಿಯ ಪೂರ್ಣಪಾಠ
483 ಮಳೆಗೆ ಬಲಿಯಾದವರು
341 ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ
1.74 ಲಕ್ಷ ಕಟ್ಟಡಗಳು ಧ್ವಂಸವಾಗಿವೆ/ಹಾನಿಯಾಗಿವೆ
54 ಲಕ್ಷ ಜನ ಮಳೆಯಿಂದ ತೊಂದರೆಗೆ ಒಳಗಾದವರು
14 ಲಕ್ಷ ಮಂದಿಗೆ ಪುನರ್ವಸತಿ ಕಲ್ಪಿಸಲಾಗಿದೆ
₹ 10,046 ಕೋಟಿ ರಸ್ತೆ, ಹೆದ್ದಾರಿಗಳಿಗೆ ಹಾನಿಯಾಗಿರುವ ಹಾನಿ
₹ 5,443 ಕೋಟಿ ಮನೆ ಮತ್ತು ಇತರ ಕಟ್ಟಡಗಳು ಧ್ವಂಸವಾಗಿರುವ ಕಾರಣ ಆಗಿರುವ ನಷ್ಟ
₹ 4,498 ಕೋಟಿ ಕೃಷಿ, ಮೀನುಗಾರಿಕೆ ಮತ್ತು ಹೈನುಗಾರಿಕೆ ಕ್ಷೇತ್ರಕ್ಕೆ ಆಗಿರುವ ನಷ್ಟದ ಮೊತ್ತ

ನಾಲ್ಕು ಅಂಶಗಳ ಕ್ರಿಯಾ ಯೋಜನೆಗೆ ಶಿಫಾರಸು

1. ಜಲಸಂಪನ್ಮೂಲಗಳ ಕೇಂದ್ರೀಕೃತ ನಿರ್ವಹಣಾ ವ್ಯವಸ್ಥೆ

2. ಪರಿಸರ ಸ್ನೇಹಿ ಮಾರ್ಗದಲ್ಲಿ ಜಮೀನಿನ ಬಳಕೆ

3. ಜನರನ್ನು ಒಳಗೊಳ್ಳುವ ಮೂಲಕ ಪುನರ್ವಸತಿ ಅನುಷ್ಠಾನ

4. ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT