ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಸಾಮರಸ್ಯ, ಸಹಬಾಳ್ವೆಗೆ ಕೇರಳವೇ ಕೊನೆಯ ಆಶಾಭಾವ: ಸಿಎಂ ಪಿಣರಾಯಿ ವಿಜಯನ್

Published 25 ಫೆಬ್ರುವರಿ 2024, 10:51 IST
Last Updated 25 ಫೆಬ್ರುವರಿ 2024, 10:51 IST
ಅಕ್ಷರ ಗಾತ್ರ

ತ್ರಿಶ್ಶೂರು: ಧಾರ್ಮಿಕ ಸಾಮರಸ್ಯ, ಸಹಬಾಳ್ವೆ ಹಾಗೂ ಸಹೋದರತೆಗೆ ಕೇರಳವೇ ಕೊನೆಯ ಆಶಾಭಾವ. ಅದನ್ನು ನಾವು ಕಳೆದುಕೊಳ್ಳಬಾರದು. ಕೇರಳದ ಸಹಜ ಸಂಸ್ಕೃತಿಯನ್ನು ಉಳಿಸಿಕೊಂಡು ಭಾರತವೆಂಬ ಭಾವನೆಯನ್ನು ಬಲಪಡಿಸಲು ನಮಗೆ ಸಾಧ್ಯವಾಗಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ ಹೇಳಿದರು. ಅಲ್ಲದೆ ದೇಶದಲ್ಲಿ ಕೋಮುವಾದ ಹಾಗೂ ಫ್ಯಾಶಿಸಂ ವಿರುದ್ಧ ಹೋರಾಟ ಮಾಡುವಂತೆ ಸಾಂಸ್ಕೃತಿಕ ನಾಯಕರಿಗೆ ಕರೆ ನೀಡಿದರು.

‘ದೇಶದ ಸಾಂಸ್ಕೃತಿಕ ಪರಂಪರೆಯು ಶ್ರೀಮಂತ ಹಾಗೂ ವೈವಿಧ್ಯವಾದುದು. ಸಾಂಸ್ಕೃತಿಕ ಏಕತೆಯನ್ನು ಹೇರಿಕೆ ಮಾಡಿದಾಗ ಪ್ರಜಾಪ್ರಭುತ್ವವು ಫ್ಯಾಶಿಸಂ ಆಗಿ ಬದಲಾಗುತ್ತದೆ’ ಎಂದು ಹೇಳಿದರು.

ಸರ್ಕಾರದ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವಾದ ‘ನವ ಕೇರಳ ಸದಸ್ಸ್’ನಲ್ಲಿ ಸಾಂಸ್ಕೃತಿಕ ನಾಯಕರೊಂದಿಗಿನ ಮುಖಾಮುಖಿ ಸಂವಾದದಲ್ಲಿ ಅವರು ಮಾತನಾಡಿದರು.

ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮ ಮುಂತಾದ ಸಾಂಸ್ಕೃತಿಕ ಏಕತೆಯನ್ನು ಹೇರಿಕೆ ಮಾಡಿದಾಗ ಪ್ರಜಾಪ್ರಭುತ್ವವು ಫ್ಯಾಶಿಸಂ ಆಗುತ್ತದೆ. ಸಾಂಸ್ಕೃತಿಕ ವಲಯದಲ್ಲೂ ಒಕ್ಕೂಟ ವ್ಯವಸ್ಥೆಯನ್ನು ಉಳಿಸಬೇಕಿದೆ. ಸಾಂಸ್ಕೃತಿಕ ವಲಯದವರ ಅಭಿಪ್ರಾಯಗಳನ್ನು ಹೆಚ್ಚಿನ ಆದ್ಯತೆಯಿಂದ ಪರಿಗಣಿಸಬೇಕು ಎಂದು ಅಭಿಪ್ರಾಯಟ್ಟರು.

‘ಸಮಕಾಲೀನ ಭಾರತದಲ್ಲಿ ನೆಲೆಯೂರುತ್ತಿರುವ ವಿಧ್ವಂಸಕ ಕೋಮುವಾದದ ವಿರುದ್ಧ ಹೋರಾಡಲು ಸಾಂಸ್ಕೃತಿಕ ವಲಯದ ಪರಿಣಾಮಕಾರಿ ಮಧ್ಯಪ್ರವೇಶ ಅಗತ್ಯ’ ಎಂದು ವಿಜಯನ್ ಅಭಿಪ್ರಾಯಪಟ್ಟರು.

‘ಈಗ ಇರುವ ಕೇರಳವನ್ನು ರೂಪಿಸುವಲ್ಲಿ ಇಲ್ಲಿನ ಸಾಂಸ್ಕೃತಿಕ ಹಾಗೂ ರಾಜಕೀಯ ಸಹೋದರತೆಯೇ ಕಾರಣ. ಕಲೆ ಹಾಗೂ ಕಲಾವಿದ ಉಳಿಯಬೇಕಾದರೆ, ಬರಹ ಹಾಗೂ ಬರಹಗಾರ ಉಳಿಯಬೇಕಾದರೆ, ಜನರ ನಡುವೆ ಒಡಕು ಉಂಟು ಮಾಡುವವರ ವಿರುದ್ಧ ಹೋರಾಟ ಮಾಡಬೇಕು. ನಮ್ಮ ಮನೆ ಬಾಗಿಲಿಗೆ ಫ್ಯಾಶಿಸಂ ಬಂದು ನಿಂತ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ’ ಎಂದರು.

‘ಕೇರಳವು ಎಡಪಂಥೀಯ ಚಿಂತನೆಗಳನ್ನು ಹೊಂದಿದ್ದು, ಇದರಿಂದಾಗಿಯೇ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಅಭಿವೃದ್ದಿ ಹಾಗೂ ಜೀವನದ ಗುಣಮಟ್ಟದಲ್ಲಿ ಮುಂದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT