ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ್ಟಯಂ: ಮತ ಚಲಾಯಿಸಿದ ಕೂಡಲೇ ಮೃತಪಟ್ಟ 99ರ ವ್ಯಕ್ತಿ

Published 21 ಏಪ್ರಿಲ್ 2024, 14:21 IST
Last Updated 21 ಏಪ್ರಿಲ್ 2024, 14:21 IST
ಅಕ್ಷರ ಗಾತ್ರ

ಕೋಟ್ಟಯಂ: ಲೋಕಸಭೆ ಚುನಾವಣೆಗೆ ಮತಚಲಾಯಿಸಿದ್ದ 99 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು, ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿರುವ ಘಟನೆ ಕೇರಳದ ಶನಿವಾರ ನಡೆದಿದೆ. 

ಕೋಟ್ಟಯಂ ಜಿಲ್ಲೆಯ ಮನಕುನ್ನು ನಿವಾಸಿಯಾದ ಎ.ಕೆ. ರಾಮನ್‌ ನಾಯರ್‌ ಅವರು ಮೃತ ವ್ಯಕ್ತಿ. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಇವರು, ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಚುನಾವಣಾ ಆಯೋಗ ಜಾರಿ ಮಾಡಿರುವ ಮನೆಯಿಂದಲೇ ಮತದಾನದ ವ್ಯವಸ್ಥೆಯ ಭಾಗವಾಗಿ ಅಧಿಕಾರಿಗಳು ಮತಪತ್ರವನ್ನು ಅವರ ಮನೆಗೇ ಕೊಂಡೊಯ್ದು ನಾಯರ್‌ ಅವರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಆರೋಗ್ಯ ಹದಗೆಟ್ಟಿದ್ದರೂ ಉತ್ಸಾಹದಲ್ಲಿ ಮತದಾನ ಮಾಡಿದ್ದ ಅವರು, ಕೆಲ ನಿಮಿಷಗಳಲ್ಲೇ ಕೊನೆಯುಸಿರೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT