ಪಥನಂತಿಟ್ಟ (ಕೇರಳ): ಶಬರಿಮಲೆ ದೇವಾಲಯದ ದ್ವಾರಪಾಲಕ ಮೂರ್ತಿಯ ಪೀಠವನ್ನು ತಿರುವಾಂಕೂರು ದೇವಸ್ವಂ ಬೋರ್ಡ್ನ (ಟಿಬಿಬಿ) ವಿಜಿಲೆನ್ಸ್ ವಿಭಾಗವು ತಿರುವನಂತಪುರದಲ್ಲಿ ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಪೀಠವನ್ನು ಕೊಡುಗೆಯಾಗಿ ನೀಡಿದವರ ಸಂಬಂಧಿಕರ ಮನೆಯಿಂದ ಅದನ್ನು ಪತ್ತೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಟಿಡಿಬಿ ವಿಜಿಲೆನ್ಸ್ ಮತ್ತು ಪೊಲೀಸ್ ಅಧೀಕ್ಷಕ ಸುನಿಲ್ ಕುಮಾರ್ ವಿ. ಅವರ ನೇತೃತ್ವದ ತಂಡವು ಪೀಠವನ್ನು ಕೊಡುಗೆಯಾಗಿದ್ದ ನೀಡಿದ್ದ ವೆಂಜರ್ಮೂಡ್ನ ಉನ್ನಿಕೃಷ್ಣನ್ ಪೊಟ್ಟಿ ಅವರ ಸಂಬಂಧಿಕರ ಮನೆಯಲ್ಲಿ ಶನಿವಾರ ಪತ್ತೆ ಮಾಡಿತ್ತು.

ಚಿನ್ನದ ಹೊದಿಕೆಯ ತಾಮ್ರದ ದ್ವಾರಪಾಲಕ ಪೀಠದ ತೂಕದಲ್ಲಿ ಇಳಿಕೆ ಆಗಿರುವುದನ್ನು ಗಮನಿಸಿದ್ದ ಕೇರಳ ಹೈಕೋರ್ಟ್, ಅದರ ಬಗ್ಗೆ ತನಿಖೆ ಮಾಡುವಂತೆ ಇತ್ತೀಚೆಗೆ ಆದೇಶಿಸಿತ್ತು. ಇದರ ನಂತರ ಪೀಠ ಕಾಣೆಯಾಗಿತ್ತು. ಅಲ್ಲದೆ, 2019ರಲ್ಲಿ ದ್ವಾರಪಾಲಕರ ಫಲಕವನ್ನು ಲೋಹಲೇಪನಕ್ಕೆಂದು ತೆಗೆದುಕೊಂಡು ಹೋದಾಗ ತಾನು ಚಿನ್ನ ಲೇಪಿತ ಪೀಠವನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾಗಿ ಪೊಟ್ಟಿ ಹೇಳಿದ್ದರು. ಅದರ ಕೆಲಸ 2020ರಲ್ಲಿ ಮುಗಿದಿದ್ದು, ನಂತರ ಕೆಲವು ಭಕ್ತರ ಮೂಲಕ ದೇವಾಲಯದ ಅಧಿಕಾರಿಗಳಿಗೆ ತಲುಪಿಸಲಾಗಿತ್ತು. ಆದರೆ ಅದು ಈಗ ದೇವಾಲಯದಲ್ಲಿ ಕಾಣುತ್ತಿಲ್ಲ ಎಂದು ಅವರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.