ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ವಿ.ವಿ.: ಆರು ತಿಂಗಳ ಮಾತೃತ್ವ ರಜೆಗೆ ಅವಕಾಶ

Last Updated 7 ಮಾರ್ಚ್ 2023, 13:10 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಂತೆಯೇ ಇಲ್ಲಿನ ಕೇರಳ ವಿಶ್ವವಿದ್ಯಾಲಯವೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಆರು ತಿಂಗಳ ಮಾತೃತ್ವ ರಜೆ ನೀಡಲು ನಿರ್ಧರಿಸಿದೆ.

‘ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎಲ್ಲಾ ಶಿಕ್ಷಣ ಸಂಸ್ಥೆಗಳೂ ತಮ್ಮ ವಿದ್ಯಾರ್ಥಿನಿಯರಿಗೆ ಮುಟ್ಟಿನ ಹಾಗೂ ಮಾತೃತ್ವ ರಜೆ ನೀಡಬಹುದು’ ಎಂದು ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರು ಇತ್ತೀಚೆಗೆ ಘೋಷಣೆ ಮಾಡಿದ್ದರು. ಇದರಂತೆ ಕೇರಳ ವಿ.ವಿಯು ಈ ನಿರ್ಧಾರ ಕೈಗೊಂಡಿದೆ.

‘ವಿದ್ಯಾರ್ಥಿನಿಯು ಆರು ತಿಂಗಳು ಮಾತೃತ್ವ ರಜೆ ತೆಗೆದುಕೊಂಡರೆ, ಕಾಲೇಜಿಗೆ ಮರುದಾಖಲಾಗುವ ಅಗತ್ಯವಿಲ್ಲ. ಆದರೆ, ವಿದ್ಯಾರ್ಥಿನಿಯು ಕಾಲೇಜಿಗೆ ಮರುಸೇರ್ಪಡೆಗೊಳ್ಳುವಾಗ ಪ್ರಾಂಶುಪಾಲರು ಆಕೆಯ ವೈದ್ಯಕೀಯ ವರದಿಗಳನ್ನು ಪರಿಶೀಲಿಸಬೇಕು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಅನುಮತಿ ಪಡೆದುಕೊಳ್ಳುವ ಅಗತ್ಯವಿಲ್ಲ’ ಎಂದು ವಿಶ್ವವಿದ್ಯಾಲಯವು ತನ್ನ ಮಾರ್ಚ್‌2ರ ಆದೇಶದಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT