ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: ಕೈಬಿಟ್ಟ ಭಾಷಣದ ತುಣುಕುಗಳನ್ನು ಕಡತಕ್ಕೆ ಸೇರಿಸಲು ಖರ್ಗೆ ಆಗ್ರಹ

Published 7 ಫೆಬ್ರುವರಿ 2024, 9:50 IST
Last Updated 7 ಫೆಬ್ರುವರಿ 2024, 9:59 IST
ಅಕ್ಷರ ಗಾತ್ರ

ನವದೆಹಲಿ: ‘ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವ ಸಂದರ್ಭದಲ್ಲಿ ತಾವು ಆಡಿರುವ ಮಾತಿನ ಕೆಲ ತುಣುಕುಗಳನ್ನು ಕಡತಗಳಿಂದ ತೆಗೆದುಹಾಕಿರುವುದನ್ನು ಪುನಃ ಸೇರಿಸಬೇಕು’ ಎಂದು ಉಪರಾಷ್ಟ್ರಪತಿಯೂ ಆದ ರಾಜ್ಯಸಭಾಧ್ಯಕ್ಷ ಜಗದೀಪ ಧನಕರ್ ಅವರನ್ನು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆಗ್ರಹಿಸಿದ್ದಾರೆ.

ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಅವರು ಪ್ರಸ್ತಾಪಿಸಿದರು.

ಫೆ. 2ರಂದು ಮಾಡಿದ ಭಾಷಣದ ಕೆಲ ಭಾಗಗಳು ಉದ್ದೇಶಕ್ಕೆ ವಿರುದ್ಧವಾಗಿವೆ ಎಂಬ ಕಾರಣ ನೀಡಿ 2 ಪುಟಗಳ ಭಾಷಣವನ್ನು ಕಡತದಿಂದ ತೆಗೆದುಹಾಕಲಾಗಿತ್ತು.

‘ನಾನು ಕೆಲವೊಂದು ಮಾತುಗಳನ್ನು ಈ ಸದನದಲ್ಲಿ ಹೇಳಿದ್ದೆ. ಅವುಗಳಲ್ಲಿ ಯಾರ ಹೆಸರನ್ನೂ ತೆಗೆದುಕೊಂಡಿರಲಿಲ್ಲ, ಯಾವುದೇ ನಿಯಮಗಳ ಉಲ್ಲಂಘನೆಯೂ ಆಗಿರಲಿಲ್ಲ. ಹೀಗಿದ್ದರೂ ಅದನ್ನು ಕಡತದಿಂದ ತೆಗೆಯಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, ತಮ್ಮ ವಾದಕ್ಕೆ ಪೂರಕವಾದ ಕೆಲವೊಂದು ನಿಯಮಗಳನ್ನು ಅವರು ಹೇಳಿದರು.

‘ನನ್ನ ಭಾಷಣದ ತುಣುಕುಗಳನ್ನು ತೆಗೆದಿದ್ದಕ್ಕೆ ನನ್ನ ಬಲವಾದ ವಿರೋಧವಿದೆ. ಅವುಗಳನ್ನು ಮರುಸ್ಥಾಪಿಸಬೇಕು’ ಎಂದು ಒತ್ತಾಯಿಸಿ ಲಿಖಿತ ಪತ್ರವನ್ನು ಸಭಾಧ್ಯಕ್ಷರಿಗೆ ನೀಡಿದರು. ಈ ಕುರಿತು ಪರಿಶೀಲಿಸಿ ನಂತರ ರೂಲಿಂಗ್ ಕೊಡುವುದಾಗಿ ಸಭಾಧ್ಯಕ್ಷ ಧನಕರ್ ಹೇಳಿದರು. 

‘ಭಾಷಣದಲ್ಲಿ ಅಸಂವಿಧಾನಿಕ ಪದಗಳ ಬಳಕೆಯ ಪಟ್ಟಿಯನ್ನು ಪರಿಷ್ಕರಿಸಲು ಸಮಿತಿಯೊಂದನ್ನು ರಚಿಸಬೇಕು’ ಎಂದು ಸದಸ್ಯರೊಬ್ಬರು ಸಭೆಗೆ ಸಲಹೆ ನೀಡಿದರು.

ಖರ್ಗೆ ಅವರ ಮಾತಿನಲ್ಲಿ ಅಸಂವಿಧಾನಿಕ ಪದ ಬಳಕೆಯಾಗಿದೆ. ‘ಕಡತಗಳಲ್ಲಿ ದಾಖಲಾಗದು’ ಎಂದು ಸಭಾಧ್ಯಕ್ಷರ ಹೇಳಿಕೆ ನಂತರ ಆಡಿರುವ 3ರಿಂದ 4 ವಿಷಯಗಳು ಕಡತದಿಂದ ಹೊರಗುಳಿದಿವೆ. 

ದಿನದ ಆರಂಭದಲ್ಲಿ ಧನಕರ್ ಅವರು ಮಾತನಾಡಿ, ‘ಸರ್ಕಾರದ ಕೆಲವೊಂದು ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಬೇಕಿರುವುದರಿಂದ ಮುಂದಿನ ಸಭೆ ಶನಿವಾರ (ಫೆ. 10ರಂದು) ನಡೆಸಲಾಗುವುದು. ಅಂದು ಶೂನ್ಯ ವೇಳೆ ಹಾಗೂ ಪ್ರಶ್ನೋತ್ತರ ವೇಳೆ ಇರದು’ ಎಂದರು.

ಬಜೆಟ್ ಅಧಿವೇಶನದ ಕೊನೆಯ ದಿನ ಶುಕ್ರವಾರ ಎಂದು ಈ ಮೊದಲು ಹೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT