ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಮೂವರನ್ನು ಕೊಂದಿದ್ದ ಹುಲಿ ಸೆರೆ

Published 18 ಮೇ 2024, 16:00 IST
Last Updated 18 ಮೇ 2024, 16:00 IST
ಅಕ್ಷರ ಗಾತ್ರ

ಚಂದ್ರಪುರ/ನಾಗ್ಪುರ: ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಹಳ್ಳಿಗಳಲ್ಲಿ ಮೂವರನ್ನು ಕೊಂದಿದ್ದ ಹುಲಿಯನ್ನು ಅರಣ್ಯ ಇಲಾಖೆಯು ಶನಿವಾರ ಸೆರೆ ಹಿಡಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಏಳು ತಿಂಗಳ ಅವಧಿಯಲ್ಲಿ ನಿಮ್ಢೇಲಾ ಸುತ್ತಮುತ್ತಲಿನ ಗ್ರಾಮಗಳಲ್ಲಿ ದಾಳಿ ನಡೆಸಿದ್ದ ಈ ಹುಲಿಯು ಮೂವರನ್ನು ಕೊಂದಿತ್ತು.

ತಾಡೋಬಾ ಅಂಧಾರಿ ಹುಲಿ ಸಂರಕ್ಷಿತ (ಟಿಎಟಿಆರ್‌) ಯೋಜನೆಯ ಕ್ಷೇತ್ರ ನಿರ್ದೇಶಕ ಡಾ. ಜಿತೇಂದ್ರ ರಾಮ್‌ಗಾಂವ್ಕರ್ ಮೇಲ್ವಿಚಾರಣೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಖಡ್ಸಂಗಿ ಅರಣ್ಯ ವಲಯ 59ರಲ್ಲಿ ಹುಲಿಯನ್ನು ಸೆರೆ ಹಿಡಿದು, ನಾಗ್ಪುರದ ಗೋರೆವಾಡ ವನ್ಯಜೀವಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡಿದ್ದ ಹುಲಿಗೆ ಚಿಕಿತ್ಸೆ: ಪೆಂಚ್ ಹುಲಿ ಸಂರಕ್ಷಿತ (ಪಿಟಿಆರ್‌) ಯೋಜನೆಯ ದೇವಲಾಪುರ (ವನ್ಯಜೀವಿ) ವ್ಯಾಪ್ತಿಯ ಟಿ–53 ಅರಣ್ಯದಿಂದ ಕಾದಾಟದಲ್ಲಿ ಗಾಯಗೊಂಡಿದ್ದ ಹುಲಿಯೊಂದನ್ನು ಶುಕ್ರವಾರ ರಕ್ಷಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.  

ಹುಲಿಯ ಗಾಯವು ಸ್ವಾಭಾವಿಕವಾಗಿ ಗುಣವಾಗದಿದ್ದರಿಂದ ರಕ್ಷಿಸಲು ಇಲಾಖೆಯು ನಿರ್ಧರಿಸಿತು ಎಂದು ಪಿಟಿಆರ್‌ನ ಉಪ ನಿರ್ದೇಶಕ ಡಾ. ಪ್ರಭುನಾಥ್‌ ಶುಕ್ಲಾ ಹೇಳಿದ್ದಾರೆ.

ಎರಡೂ ಕಣ್ಣುಗಳ ಮಧ್ಯ ಭಾಗದಲ್ಲಿ ಗಾಯಗೊಂಡಿರುವ ಹುಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ತಪಾಸಣೆಗಾಗಿ ಪಂಜರದೊಳಗಿರಿಸಲಾಗಿದೆ ಎಂದಿದ್ದಾರೆ.

ಪೆಂಚ್ ಹುಲಿ ಸಂರಕ್ಷಿತ ಅರಣ್ಯದಲ್ಲಿ ಗಾಯಗೊಂಡಿದ್ದ ಹುಲಿಯನ್ನು ಶುಕ್ರವಾರ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ 
–ಪಿಟಿಐ ಚಿತ್ರ
ಪೆಂಚ್ ಹುಲಿ ಸಂರಕ್ಷಿತ ಅರಣ್ಯದಲ್ಲಿ ಗಾಯಗೊಂಡಿದ್ದ ಹುಲಿಯನ್ನು ಶುಕ್ರವಾರ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ  –ಪಿಟಿಐ ಚಿತ್ರ

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT