ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಅರ್ಜಿ ವಿಚಾರಣೆ ನಡೆಸಿ, ಇಂತಹ ಆದೇಶವನ್ನು ಪ್ರಕಟಿಸಲು ತನಗೆ ಯಾವುದೇ ಅವಕಾಶವಿಲ್ಲ ಎಂದು ಅರ್ಜಿಯನ್ನು ತಳ್ಳಿ ಹಾಕಿತು.
‘ವೈದ್ಯರ ಕುಂದುಕೊರತೆಗಳ ಬಗ್ಗೆ ಗಮನಹರಿಸಬಹುದೇ ಹೊರತು ಮುಖ್ಯಮಂತ್ರಿ ಒಬ್ಬರಿಗೆ ರಾಜೀನಾಮೆ ನೀಡಬೇಕು ಎಂದು ಹೇಳಲು, ಇದು ರಾಜಕೀಯ ವೇದಿಕೆಯಲ್ಲ ಹಾಗೂ ಅಂತಹ ಆದೇಶ ಹೊರಡಿಸುವುದು ತಮ್ಮ ಅಧಿಕಾರದ ಭಾಗವಲ್ಲ’ ಎಂದು ಪೀಠ ಹೇಳಿದೆ.