ಕಾಲ್ತುಳಿತದ ಕುರಿತು ತಿಳಿಯಿತು. ಆದರೆ ಕುಂಭಮೇಳಕ್ಕೆ ಬರುವುದು ಪವಿತ್ರವಾದ ಹಾಗೂ ಧಾರ್ಮಿಕವಾದ ವಿಚಾರ. ಹಿಂದೂಗಳಾಗಿ ಹುಟ್ಟಿದವರು ಇದನ್ನು ಮಾಡಲೇಬೇಕು. ಏನೇ ಆದರೂ ಇದನ್ನು ತಪ್ಪಿಸಿಕೊಳ್ಳಲಾಗದು.
ನವೀದ್ ಪ್ರಧಾನ್
ರೈಲಿನಲ್ಲಿ ನೂಕುನುಗ್ಗಲು ಇತ್ತು. ಪ್ರಯಾಣ ಬಹಳ ತ್ರಾಸದಾಯಕವಾಗಿತ್ತು. ಆದರೆ ಪವಿತ್ರ ಸ್ನಾನದ ಬಳಿಕ ನಮ್ಮೆಲ್ಲ ಸುಸ್ತು ನೀಗಿತು. ಸಂತೋಷಗೊಂಡೆವು.
ಪದ್ಮಾವತಿ ದಾಮ್
ಮೇಳದ ಬಗ್ಗೆ ಒಳ್ಳೆಯದು ಕೆಟ್ಟದ್ದು ಕೇಳುತ್ತಲೇ ಇರುತ್ತೇವೆ. ಆದರೆ ಅವುಗಳು ನಮಗೆ ಮುಖ್ಯವಲ್ಲ. ಬಹಳ ವರ್ಷಗಳಿಂದ ಕುಂಭಮೇಳಕ್ಕೆ ಬರಬೇಕು ಎಂದು ಆಸೆಪಟ್ಟಿದ್ದೆವು. ಮೋದಿ ಯೋಗಿ ಹಾಗೂ ದೇವರಿಗೆ ಧನ್ಯವಾದ.