ಪಟ್ನಾ: ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಮತ್ತು ಕುಟುಂಬದಿಂದ ಹೊರಹಾಕಲ್ಪಟ್ಟಿದ್ದ ತನ್ನ ಹಿರಿಯ ಪುತ್ರ ತೇಜ್ಪ್ರತಾಪ್ ಯಾದವ್ ಮನೆಯಲ್ಲಿ ಬುಧವಾರ ನಡೆದ ಸಂಕ್ರಾಂತಿ ಹಬ್ಬದಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಭಾಗಿಯಾಗಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿರುವ ಲಾಲೂ ಕುಟುಂಬದಲ್ಲಿ ಮತ್ತೆ ಸಾಮರಸ್ಯ ಮೂಡುತ್ತಿರುವುದಕ್ಕೆ ಈ ಬೆಳವಣಿಗೆ ಮುನ್ಸೂಚನೆಯೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಆರಂಭವಾಗಿವೆ.

ಉಚ್ಚಾಟನೆ ಬಳಿಕ ಜನಶಕ್ತಿ ಜನತಾ ದಳ(ಜೆಜೆಡಿ) ಸ್ಥಾಪಿಸಿದ್ದ ತೇಜ್ಪ್ರತಾಪ್ ಮಂಗಳವಾರ ರಾತ್ರಿ ತನ್ನ ಪೋಷಕರು ಮತ್ತು ಸಹೋದರ ತೇಜಸ್ವಿ ಅವರನ್ನು ಭೇಟಿಯಾಗಿ ಹಬ್ಬಕ್ಕೆ ಆಹ್ವಾನಿಸಿದರು. ಆದರೆ ಲಾಲೂ ಮಾತ್ರ ತೇಜ್ ಪ್ರತಾಪ್ ಮನೆಗೆ ಆಗಮಿಸಿದ್ದರು.

ಹಿರಿಯ ಮಗನ ಸಾರ್ವಜನಿಕ ನಡವಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಲಾಲೂ, ಕಳೆದ ಮೇನಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು ಮತ್ತು ಕುಟುಂಬದಿಂದ ಹೊರಹಾಕಿರುವುದಾಗಿ ಘೋಷಿಸಿದ್ದರು. ತೇಜ್ಪ್ರತಾಪ್ ಹೊಸ ಪಕ್ಷ ಜೆಜೆಡಿ ವಿಧಾನಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿತ್ತು.

ದೆಹಲಿ ಉಪ ಮುಖ್ಯಮಂತ್ರಿ ಬಿಜೆಪಿ ವಿಜಯ್ ಕುಮಾರ್ ಸಿನ್ಹಾ ಅವರ ಮನೆಯಲ್ಲಿ ಮಂಗಳವಾರ ನಡೆದ ಸಂಕ್ರಾಂತಿ ಹಬ್ಬದಲ್ಲಿ ತೇಜ್ಪ್ರತಾಪ್ ಭಾಗಿಯಾಗಿದ್ದರು. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಅವರು ಸೇರುತ್ತಾರೆ ಎಂಬ ಊಹಾಪೋಹಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.