ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರದಲ್ಲಿ ಭೂಕುಸಿತ | ಹೆದ್ದಾರಿ ಬಂದ್; ನಿಂತಲ್ಲೇ ನಿಂತ ಕನಿಷ್ಠ 500 ಟ್ರಕ್

Published 17 ಆಗಸ್ಟ್ 2023, 9:56 IST
Last Updated 17 ಆಗಸ್ಟ್ 2023, 9:56 IST
ಅಕ್ಷರ ಗಾತ್ರ

ಇಂಫಾಲ್‌: ಮಣಿಪುರದ ನೊನೇ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಇಂಫಾಲ್‌–ಸಿಲ್ಛಾರ್‌ ಹೆದ್ದಾರಿ ಬಂದ್‌ ಆಗಿದೆ. ಇದರಿಂದಾಗಿ ಕನಿಷ್ಠ 500 ಸರಕು ಸಾಗಣೆಯ ಟ್ರಕ್‌ಗಳು ನಿಂತಲ್ಲೇ ನಿಲ್ಲುವಂತಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಐರಾಂಗ್–ಅವಾಂಗ್‌ಖುಲ್‌, ಖಾಂಗ್‌ಸಂಗ್‌–ಅವಾಂಗ್‌ಖುಲ್‌ ಹಾಗೂ ರಂಗ್‌ಖುಯಿ ಗ್ರಾಮಗಳ ನಡುವೆ ಸಾಗಿರುವ ರಾಷ್ಟ್ರೀಯ ಹೆದ್ದಾರಿ–37ರಲ್ಲಿ ಭೂಕುಸಿತವಾಗಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದು ಭೂಕುಸಿತಕ್ಕೆ ಕಾರಣವಾಗಿದೆ. ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಿಲ್ಲೆಯಲ್ಲಿ ಕಳೆದ ವರ್ಷವೂ ಭೂಕುಸಿತ ಸಂಭವಿಸಿತ್ತು. ಜಿರಿಬಮ್‌–ಇಂಫಾಲ್‌ ರೈಲು ಮಾರ್ಗದಲ್ಲಿ ತುಪುಲ್‌ ನಿಲ್ದಾಣ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ದುರಂತದಲ್ಲಿ 61 ಜನರು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT