ವಯನಾಡ್: ಭೂಕುಸಿತ ಅವಘಡದ ಬಳಿಕ ನಾಪತ್ತೆಯಾಗಿರುವ ನಿವಾಸಿಗಳ ಪಟ್ಟಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಕೇರಳ ಸರ್ಕಾರ ಮಂಗಳವಾರ ತಿಳಿಸಿದೆ.
‘ನಾಪತ್ತೆಯಾದವರ ನಿಖರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಭೂಕುಸಿತದ ಎಲ್ಲ ಬಾಧಿತರಿಗೂ ಸಮಗ್ರವಾಗಿ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ’ ಎಂದು ಕಂದಾಯ ಸಚಿವ ಕೆ.ರಾಜನ್ ತಿಳಿಸಿದರು.
ಜಗತ್ತಿಗೆ ಮಾದರಿ ಆಗುವಂತೆ ಪುನರ್ವಸತಿ ಕಾರ್ಯ ಕೈಗೊಳ್ಳಲಾಗುವುದು ಎಂದರು. ನಾಮಾವಶೇಷ ಆಗಿರುವ ಚೂರಲ್‌ಮಲ, ಮುಂಡಕ್ಕೈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.