ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ಜನಸಂಖ್ಯೆಗೂ ಪರಿಸರ ಮಾಲಿನ್ಯಕ್ಕೂ ಸಂಬಂಧವಿಲ್ಲ: ಡಾ.ಜೂಲಿಟ್ಟಾ ಒನಬಾಂಜೊ

Published 25 ಜೂನ್ 2023, 16:11 IST
Last Updated 25 ಜೂನ್ 2023, 16:11 IST
ಅಕ್ಷರ ಗಾತ್ರ

ನವದೆಹಲಿ: ಒಂದು ದೇಶ ದೊಡ್ಡ ಜನಸಂಖ್ಯೆ ಹೊಂದಿದೆ ಎಂದಾಕ್ಷಣ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಅನಿಲಗಳನ್ನು ಹೆಚ್ಚಾಗಿ ಹೊರಸೂಸುತ್ತಿವೆ ಎಂದರ್ಥವಲ್ಲ. ಈ ತಪ್ಪುಕಲ್ಪನೆಯನ್ನು ಹೋಗಲಾಡಿಸುವ ಅಗತ್ಯ ಇದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್‌ಪಿಎ)ಯ ಅಧಿಕಾರಿ ಹೇಳಿದ್ದಾರೆ.

‘ಜನಸಂಖ್ಯೆಗೂ, ಹೊರಸೂಸುವಿಕೆ ಪ್ರಮಾಣಕ್ಕೂ ಸಂಬಂಧ ಇಲ್ಲ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಕಡಿಮೆ ಪ್ರಮಾಣದಲ್ಲಿ ಹಸಿರುಮನೆ ಅನಿಲಗಳನ್ನು ಹೊರಸೂಸುತ್ತವೆ. ಆದರೆ, ಈ ರಾಷ್ಟ್ರಗಳೇ ಹವಾಮಾನ ಬದಲಾವಣೆಯಿಂದಾಗುವ ಕೆಟ್ಟ ಪರಿಣಾಮಗಳನ್ನು ಹೆಚ್ಚು ಅನುಭವಿಸುತ್ತಿವೆ’ ಎಂದು ಯುಎನ್‌ಎಫ್‌ಪಿಎ ನಿರ್ದೇಶಕಿ (ತಾಂತ್ರಿಕ ವಿಭಾಗ) ಡಾ.ಜೂಲಿಟ್ಟಾ ಒನಬಾಂಜೊ ಹೇಳಿದ್ದಾರೆ.

‘ಭಾರತ ಅಧಿಕ ಜನಸಂಖ್ಯೆ ಹೊಂದಿದ ದೇಶವಾಗಿರುವ ಕಾರಣ, ಹಸಿರುಮನೆ ಅನಿಲಗಳನ್ನು ಅಧಿಕ ಪ್ರಮಾಣದಲ್ಲಿ ಹೊರಸೂಸುತ್ತದೆ ಎಂಬ ಅಭಿಪ್ರಾಯವನ್ನು ಹೋಗಲಾಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT