ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ನಾಗರಿಕ ಸಂಹಿತೆ: ಸಾರ್ವಜನಿಕರ ಅಭಿಪ್ರಾಯ ಆಹ್ವಾನಿಸಿದ ಕಾನೂನು ಆಯೋಗ

Published 14 ಜೂನ್ 2023, 16:19 IST
Last Updated 14 ಜೂನ್ 2023, 16:19 IST
ಅಕ್ಷರ ಗಾತ್ರ

ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಕಾನೂನು ಆಯೋಗವು ಸಾರ್ವಜನಿಕರು ಹಾಗೂ ಮಾನ್ಯತೆ ಪಡೆದಿರುವ ಧಾರ್ಮಿಕ ಸಂಘಟನೆಗಳಿಂದ ಅಭಿಪ್ರಾಯಗಳನ್ನು ಬುಧವಾರ ಆಹ್ವಾನಿಸಿದೆ.

30 ದಿನಗಳ ಒಳಗಾಗಿ ಅಭಿಪ್ರಾಯಗಳನ್ನು ತಿಳಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ಆಯೋಗ ತಿಳಿಸಿದೆ.

ಸಲಹೆ, ಅಭಿಪ್ರಾಯಗಳನ್ನು membersecretary-lci@gov.in ಗೆ ಈ–ಮೇಲ್‌ ಮಾಡಬಹುದು.

‘ಸದಸ್ಯ ಕಾರ್ಯದರ್ಶಿ, ಭಾರತೀಯ ಕಾನೂನು ಆಯೋಗ, 4ನೇ ಮಹಡಿ, ಲೋಕನಾಯಕ ಭವನ, ಖಾನ್‌ ಮಾರ್ಕೆಟ್, ನವದೆಹಲಿ–110003’ ಈ ವಿಳಾಸಕ್ಕೆ ಕೂಡ ಕಳುಹಿಸಬಹುದು ಎಂದು ಆಯೋಗ ತಿಳಿಸಿದೆ.

ಅಗತ್ಯ ಕಂಡುಬಂದಲ್ಲಿ, ಖುದ್ದಾಗಿ ಅಹವಾಲು ಆಲಿಸಲು/ಚರ್ಚಿಸಲು ವ್ಯಕ್ತಿ ಅಥವಾ ಸಂಘಟನೆಯನ್ನು ಆಹ್ವಾನಿಸಲಾಗುವುದು ಎಂದೂ ಆಯೋಗ ತಿಳಿಸಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದು ಬಿಜೆಪಿಯ ಕಾರ್ಯಸೂಚಿಗಳಲ್ಲೊಂದು. ಈ ಸಂಬಂಧ ಉತ್ತರಾಖಂಡ ಸರ್ಕಾರವು ಈಗಾಗಲೇ ಸಮಿತಿಯೊಂದನ್ನು ರಚಿಸಿದ್ದು, ಸಂವಾದಕ್ಕೆ ಚಾಲನೆ ನೀಡಿದೆ.

ಈ ಸಂಬಂಧ ಸಮಿತಿಗಳನ್ನು ರಚಿಸುವುದಾಗಿ ಗುಜರಾತ್, ಮಧ್ಯಪ್ರದೇಶ ಸರ್ಕಾರಗಳು ಹೇಳಿದ್ದರೆ,  ಹರಿಯಾಣ, ಅಸ್ಸಾಂ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಸಮಿತಿ ರಚಿಸುವ ಇಂಗಿತ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT