ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತ ಘಜಲ್‌, ಹಿನ್ನೆಲೆ ಗಾಯಕ ಪಂಕಜ್‌ ಉಧಾಸ್‌ ನಿಧನ

Published 26 ಫೆಬ್ರುವರಿ 2024, 11:12 IST
Last Updated 26 ಫೆಬ್ರುವರಿ 2024, 11:12 IST
ಅಕ್ಷರ ಗಾತ್ರ

‌‌‌ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಖ್ಯಾತ ಘಜಲ್‌ ಗಾಯಕ ಪಂಕಜ್‌ ಉಧಾಸ್‌ ಅವರು ಇಂದು ನಿಧನರಾದರು. ಅವರಿಗೆ 72 ವರ್ಷವಾಗಿತ್ತು. 

ಪಂಕಜ್‌ ಅವರ ನಿಧನದ ಮಾಹಿತಿಯನ್ನು ಅವರ ಕುಟುಂಬ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, 'ದೀರ್ಘಕಾಲದ ಅನಾರೋಗ್ಯದಿಂದ ಫೆಬ್ರುವರಿ 26, 2024 ರಂದು ಪಂಕಜ್ ಉಧಾಸ್‌ ಅವರು ನಿಧನರಾದರು. ಅವರ ನಿಧನದ ಬಗ್ಗೆ ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇವೆ’ ಬರೆದುಕೊಂಡಿದ್ದಾರೆ.

ಮಹೇಶ್ ಭಟ್ ಅವರ 1986 ರ ಕ್ರೈಮ್ ಥ್ರಿಲ್ಲರ್ ‘ನಾಮ್‌’ ಚಿತ್ರದ ‘ಚಿಟ್ಟಿ ಆಯಿ ಹೈ’ ಹಾಡು ಪಂಕಜ್‌ ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು.

ಪಂಕಜ್‌ ಅವರು 2006ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

ಹಿಂದಿ ಮಾತ್ರವಲ್ಲದೆ ಕನ್ನಡದಲ್ಲಿಯೂ ಹಿನ್ನೆಲೆ ಗಾಯಕರಾಗಿ ಪಂಕಜ್‌ ಹಾಡಿದ್ದಾರೆ. ಸ್ಪರ್ಶ ಚಿತ್ರದ ಬರೆಯದ ಮೌನ ಕವಿತೆ, ಚಂದಕ್ಕಿಂತ ಚಂದ ಹಾಡನ್ನು ಪಂಕಜ್‌ ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT