ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗ್ಪುರ: ಪೆಂಚ್ ಹುಲಿ ರಕ್ಷಿತಾರಣ್ಯದಲ್ಲಿ ಕಾಣಿಸಿಕೊಂಡ ಕಾಡು ಬೆಕ್ಕು

Published 12 ಮೇ 2024, 16:17 IST
Last Updated 12 ಮೇ 2024, 16:17 IST
ಅಕ್ಷರ ಗಾತ್ರ

ನಾಗ್ಪುರ: ಮಹಾರಾಷ್ಟ್ರದ ಪೆಂಚ್‌ ಹುಲಿ ರಕ್ಷಿತಾರಣ್ಯದಲ್ಲಿ ಮೊದಲ ಬಾರಿಗೆ ಕಾಡು ಬೆಕ್ಕು ಕಾಣಿಸಿಕೊಂಡಿದೆ ಎಂದು ಅರಣ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

‘ಪ್ರಿಯೊನೇಲರಸ್‌ ಬೆಂಗಾಲೆನ್ಸಿಸ್‌’ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುವ ಈ ಬೆಕ್ಕು ‘ಫೆಲಿಡೆ’ ಕುಟುಂಬಕ್ಕೆ ಸೇರಿದ್ದು. ಇದರ ಮೈಬಣ್ಣ ಚಿರತೆಯ ಬಣ್ಣದಂತೆ ಇರುತ್ತದೆ.

‘ಕ್ಯಾಮೆರಾ ಟ್ರ್ಯಾಪಿಂಗ್ ಮೂಲಕ ಇವುಗಳ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. ನಾಗ್ಪುರ ಜಿಲ್ಲೆಯ ಪೆಂಚ್‌ ಬಳಿಯ ನರಹರ ಗ್ರಾಮದ ಬಳಿ ಕಾಡುಬೆಕ್ಕು ಪತ್ತೆಯಾಗಿದೆ’ ಎಂದು ರಕ್ಷಿತಾರಣ್ಯದ ಉಪನಿರ್ದೇಶಕ ಪ್ರಭುನಾಥ ಶುಕ್ಲಾ ಹೇಳಿದ್ದಾರೆ.

‘ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ತೊರೆಯೊಂದರ ಬಳಿ ಕಾಡು ಬೆಕ್ಕು ಪತ್ತೆಯಾಗಿದೆ. ದೇಶದ ಕೇಂದ್ರ ಭಾಗದಲ್ಲಿ ಇದೇ ಮೊದಲ ಬಾರಿಗೆ ಇದು ಕಾಣಿಸಿಕೊಂಡಿದೆ’ ಎಂದು ಹೇಳಿದ್ದಾರೆ.

ಇವು ಹೆಚ್ಚಾಗಿ ಈಶಾನ್ಯ ಭಾರತ, ಹಿಮಾಲಯ ತಪ್ಪಲು, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಪಶ್ಚಿಮ ಘಟ್ಟದ ಕೆಲವಡೆ ಕಂಡುಬರುತ್ತವೆ. ದೇಶದ ಕೇಂದ್ರ ಭಾಗ ಇವುಗಳ ಆವಾಸಸ್ಥಾನವಲ್ಲ ಎಂದೇ ಭಾವಿಸಲಾಗಿತ್ತು ಎಂದು ಶುಕ್ಲಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT