ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ಮಹಿಳಾ ದೌರ್ಜನ್ಯ ಪ್ರಕರಣ ಹೆಚ್ಚಳ: ರಾಷ್ಟ್ರೀಯ ಮಹಿಳಾ ಆಯೋಗ ಕಳವಳ

Last Updated 17 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್ ಅವಧಿಯಲ್ಲಿ ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಪ್ರಕರಣಗಳು ಹೆಚ್ಚಿದ್ದು, ಮಾರ್ಚ್‌ 23ರಿಂದ ಏಪ್ರಿಲ್ 16ರ ತನಕ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (ಎನ್‌ಸಿಡಬ್ಲ್ಯು) ಒಟ್ಟು 587 ದೂರುಗಳು ಬಂದಿವೆ. ಇದರಲ್ಲಿ 239 ಪ್ರಕರಣಗಳು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಪಟ್ಟಿವೆ.

ಎನ್‌ಸಿಡಬ್ಲ್ಯು ಹಂಚಿಕೊಂಡಿರುವ ಮಾಹಿತಿಗಳ ಪ್ರಕಾರ, ಫೆ. 27ರಿಂದ ಮಾರ್ಚ್ 22ರ ಅವಧಿಯಲ್ಲಿ 123 ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ದೂರು ಬಂದಿದ್ದವು. ಕಳೆದ 25 ದಿನಗಳ ಅವಧಿಯಲ್ಲಿ ಆಯೋಗವು ಇಂಥ 239 ದೂರುಗಳನ್ನು ಸ್ವೀಕರಿಸಿದೆ.

ಲಾಕ್‌ಡೌನ್ ಘೋಷಣೆಯಾದ ಬಳಿಕ ಶೋಷಕ ಮತ್ತು ಸಂತ್ರಸ್ತೆ ಒಟ್ಟಿಗೆ ಇರಬೇಕಾದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಮಹಿಳೆಯ ಮೇಲಿನ ಅಪರಾಧಗಳ ಪ್ರಕರಣಗಳಲ್ಲಿ ಹೆಚ್ಚಳವುಂಟಾಗಿದೆ ಎಂದು ಎನ್‌ಸಿಡಬ್ಲ್ಯು ಅಧ್ಯಕ್ಷೆ ರೇಖಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದರು.

ಮಹಿಳೆಯರಿಗೆ ಸಂಬಂಧಿಸಿದಂತೆ ಒಟ್ಟು 396 ದೂರುಗಳುಫೆ. 27ರಿಂದ ಮಾರ್ಚ್ 22ರ ಒಳಗೆ ಆಯೋಗಕ್ಕೆ ಬಂದಿದ್ದವು. ಮಾರ್ಚ್ 23ರಿಂದ ಏಪ್ರಿಲ್ 16ರ ತನಕ ಆಯೋಗವು ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 587 ದೂರುಗಳನ್ನು ಸ್ವೀಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT