ತನಗೆ 80 ಮಧ್ಯಮ ಸಾರಿಗೆ ವಿಮಾನಗಳ ಅಗತ್ಯವಿದೆ ಎಂದು ಹೇಳಿದ್ದ ಭಾರತೀಯ ವಾಯುಪಡೆ (ಐಎಎಫ್), ಅದನ್ನು ಪಡೆಯುವ ನಿಟ್ಟಿನಲ್ಲಿ ಕಳೆದ ವರ್ಷ ಆರಂಭಿಕ ಟೆಂಡರ್ ಆಹ್ವಾನಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಲಾಕ್‌ಹೀಡ್ ಮಾರ್ಟಿನ್ ಕಂಪನಿ, ಐಎಎಫ್‌ನ ಅವಶ್ಯಕತೆ ಪೂರೈಸಲು ‘ಸಿ–130ಜೆ ಸೂಪರ್ ಹರ್ಕ್ಯುಲಸ್’ ವಿಮಾನಗಳು ಸೂಕ್ತ ಎಂದಿತ್ತು.