ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾರಾಣಸಿ: ಮೋದಿ ಗೆಲುವಿನ ಅಂತರ ಕುಸಿತ

Published 6 ಜೂನ್ 2024, 0:17 IST
Last Updated 6 ಜೂನ್ 2024, 0:17 IST
ಅಕ್ಷರ ಗಾತ್ರ

ನವದೆಹಲಿ: ನಿರೀಕ್ಷೆಯಂತೆ ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಗೆಲುವು ದಾಖಲಿಸಿದ್ದಾರೆ. ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದ್ದರೂ, ಮತ ಪ್ರಮಾಣ ಹೆಚ್ಚಾಗಿರುವ ಈ ಸಂದರ್ಭದಲ್ಲೂ ಅವರು ಗಳಿಸಿರುವ ಮತಸಂಖ್ಯೆ ಕಡಿಮೆಯಾಗಿದೆ.

2014ರಲ್ಲಿ ಮೋದಿ ಅವರು 5,81,022 ಮತಗಳೊಂದಿಗೆ ಶೇ 56.37 ಮತ ಪ್ರಮಾಣ ಪಡೆದಿದ್ದರು. 2019ರಲ್ಲಿ ಅವರು 6,74,664 ಮತ ಗಳೊಂದಿಗೆ ಶೇ 63.62ರಷ್ಟು ಮತ ಗಳಿಸಿದ್ದರು. ಈ ಬಾರಿ ಮೋದಿ ಅವರು ಶೇ 54.24 ಮತ ಪ್ರಮಾಣದೊಂದಿಗೆ 6,12,970 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಅಂದರೆ, ಕಳೆದ ಬಾರಿಯ ಮತ ಪ್ರಮಾಣಕ್ಕೆ ಹೋಲಿಸಿದರೆ, ಈ ಬಾರಿ ಅವರ ಮತ ಪ್ರಮಾಣವು
ಶೇ 9ರಷ್ಟು ಕುಸಿದಿದೆ.

ಇನ್ನೊಂದೆಡೆ, ಮೋದಿ ಅವರ ಪ್ರತಿ ಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಅಜಯ್ ರಾಯ್ ಅವರ ಮತ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡುಬಂದಿದೆ. 2019ರ ಚುನಾವಣೆಯಲ್ಲಿ ಶೇ 14ರಷ್ಟು ಮತ ಪಡೆದಿದ್ದ ಅಜಯ್ ರಾಯ್, ಈ ಬಾರಿ ಶೇ 40.74ರಷ್ಟು ಮತಗಳನ್ನು ಗಳಿಸಿದ್ದಾರೆ. ‘ಇಂಡಿಯಾ’ ಕೂಟದ ಮೈತ್ರಿಯ ಕಾರಣದಿಂದ ಸಮಾಜವಾದಿ ಪಕ್ಷವು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಹಾಕಿರಲಿಲ್ಲ. 

ವಾರಾಣಸಿ ಲೋಕಸಭಾ ಕ್ಷೇತ್ರದ ಮತ್ತೊಂದು ವಿಶೇಷತೆ ಎಂದರೆ, ಚುನಾ ವಣೆಯಿಂದ ಚುನಾವಣೆಗೆ ಚಲಾವಣೆಆಗುತ್ತಿರುವ ಮತಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ ಒಟ್ಟು 10,30,812 ಮತ ಚಲಾವಣೆಯಾಗಿದ್ದರೆ, 2019 ರಲ್ಲಿ 10,60,829, 2024ರಲ್ಲಿ ಒಟ್ಟು 11,30,143 ಮತ ಚಲಾವಣೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT