ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥಾ ಮಾತು

Published 2 ಏಪ್ರಿಲ್ 2024, 20:22 IST
Last Updated 2 ಏಪ್ರಿಲ್ 2024, 20:22 IST
ಅಕ್ಷರ ಗಾತ್ರ

ರಷ್ಯಾ ಮತ್ತು ಚೀನಾದಲ್ಲಿರುವ ಆಡಳಿತದ ಮಾದರಿಯನ್ನು ದೇಶದಲ್ಲಿಯೂ ಅನುಸರಿಸಲು ಬಿಜೆಪಿ ಬಯಸುತ್ತಿದೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರಂತೆ ಇಲ್ಲಿಯೂ ಯಾವುದೇ ವಿರೋಧಪಕ್ಷಗಳಿಲ್ಲದೆ ಆಡಳಿತ ನಡೆಸಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ. ಸಂವಿಧಾನದ ರಕ್ಷಣೆಗಾಗಿಯೇ ‘ಇಂಡಿಯಾ’ ಒಕ್ಕೂಟವು ರೂಪುಗೊಂಡಿದ್ದು, ಸಂವಿಧಾನವನ್ನು ಸಮಾಧಿ ಮಾಡಲು ನಾವು ಬಿಡುವುದಿಲ್ಲ. ಲಡಾಖ್‌ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾವು ನಿರಂತರ ಅತಿಕ್ರಮಣ ಮಾಡುತ್ತಿದ್ದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಏಕೆ ಮೌನವಾಗಿದೆ?

-ಫಾರೂಕ್ ಅಬ್ದುಲ್ಲಾ, ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ

ಜಾತಿ, ಕುಟುಂಬ ಮತ್ತು ಓಲೈಕೆ ರಾಜಕಾರಣ ಸಂಸ್ಕೃತಿಯಲ್ಲಿ ಬದಲಾವಣೆ ತಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿಯ ರಾಜಕೀಯವನ್ನು ಮುನ್ನೆಲೆಗೆ ತಂದಿದ್ದಾರೆ. ಜನಸಾಮಾನ್ಯರ ಮನೋಭಾವ ಕೂಡ ಬದಲಾಗಿದೆ. ಅವರು ಈ ಬದಲಾವಣೆಯನ್ನು ಸ್ವೀಕರಿಸಿದ್ದಾರೆ. ಮೋದಿ ಅವರು ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ. ‘ಇಂಡಿಯಾ’ ಒಕ್ಕೂಟವು ಭ್ರಷ್ಟ ಮತ್ತು ಕುಟುಂಬ ರಾಜಕಾಣದ ಹಿನ್ನೆಲೆಯಿಂದ ಬಂದಿರುವ ಮುಖಂಡರ ಗುಂಪಾಗಿದೆ

- ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT