ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಪಂಜಾಬ್‌ನ 7 ಕ್ಷೇತ್ರಗಳಿಗೆ ಎಸ್‌ಎಡಿ ಅಭ್ಯರ್ಥಿ ಘೋಷಣೆ

Published 13 ಏಪ್ರಿಲ್ 2024, 11:00 IST
Last Updated 13 ಏಪ್ರಿಲ್ 2024, 11:00 IST
ಅಕ್ಷರ ಗಾತ್ರ

ಚಂಡೀಗಢ: ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಪಕ್ಷವು ಪಂಜಾಬ್‌ನ ಏಳು ಲೋಕಸಭಾ ಕ್ಷೇತ್ರಗಳಿಗೆ ಶನಿವಾರ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ಹಿರಿಯ ನಾಯಕ ಪ್ರೇಮ್‌ಸಿಂಗ್ ಚಂದುಮಾಜ್ರಾ ಅವರನ್ನು ಆನಂದಪುರ ಸಾಹಿಬ್‌ ಕ್ಷೇತ್ರದಿಂದ ಹಾಗೂ ದಲ್ಜಿತ್‌ ಸಿಂಗ್‌ ಚೀಮಾ ಅವರನ್ನು ಗುರುದಾಸಪುರ ಕ್ಷೇತ್ರದಿಂದಲೂ ಕಣಕ್ಕಿಳಿಸಿದೆ. 

ಮಾಜಿ ಶಾಸಕ ಎನ್.ಕೆ.ಶರ್ಮಾ (ಪಟಿಯಾಲ), ಮಾಜಿ ಸಚಿವ ಅನಿಲ್‌ ಜೋಶಿ (ಅಮೃತಸರ), ವಿಕ್ರಮ್‌ಜೀತ್‌ ಸಿಂಗ್‌ ಖಾಲ್ಸಾ (ಫತೇಹ್‌ಗಢ ಸಾಹಿಬ್), ರಾಜ್ವಿಂದರ್‌ ಸಿಂಗ್ (ಫರೀದ್‌ಕೋಟ್‌) ಮತ್ತು ಇಕ್ಬಾಲ್‌ ಸಿಂಗ್‌ ಝೂಂಡಾ (ಸಂಗರೂರ್) ಅವರಿಗೆ ಟಿಕೆಟ್‌ ನೀಡಿದೆ.

ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಅಧ್ಯಕ್ಷ ದಲ್ಜಿತ್‌ ಸಿಂಗ್ ಚೀಮಾ ಅವರು ‘ಎಕ್ಸ್‌’ನಲ್ಲಿ ಪ್ರಕಟಿಸಿದರು. ಪಂಜಾಬ್‌ನ 13 ಲೋಕಸಭಾ ಕ್ಷೇತ್ರಗಳಿಗೆ ಜೂನ್‌ 1 ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT