ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ನಾಯಿಗಳ ಹಾವಳಿ ತಡೆಯಲು ಜನರಿಂದ ಸಲಹೆ ಕೇಳಿದ ಮಧ್ಯಪ್ರದೇಶ ಸಿಎಂ ಯಾದವ್

Published 14 ಜನವರಿ 2024, 9:50 IST
Last Updated 14 ಜನವರಿ 2024, 9:50 IST
ಅಕ್ಷರ ಗಾತ್ರ

ಭೋಪಾಲ್: 7 ತಿಂಗಳ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದರಿಂದ ಬಾಲಕ ಮೃತಪಟ್ಟಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಇದೀಗ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಬೀದಿ ನಾಯಿಗಳ ಹಾವಳಿ ತಡೆಯಲು ಜನರ ಬಳಿ ಸಲಹೆಗಳನ್ನು ಕೇಳಿದ್ದಾರೆ.

ಭೋಪಾಲ್‌ನ ಅಯೋಧ್ಯೆ ನಗರದಲ್ಲಿ ಬೀದಿ ನಾಯಿಗಳು 7 ತಿಂಗಳ ಬಾಲಕನ ಮೇಲೆ ದಾಳಿ ಮಾಡಿದ್ದರಿಂದ ಬಾಲಕ ಬುಧವಾರ ( ಜನವರಿ 10) ಮೃತಪಟ್ಟಿತ್ತು. ದಾಳಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಈ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಯಾದವ್‌ ‘ಇಂತಹ ಘಟನೆಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಯಾವ ರೀತಿ ಜಾಗೃತಿ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಜನರಿಂದ ಸಲಹೆಗಳನ್ನು ಕೇಳಲಾಗಿದೆ’. ಮೃತ ಬಾಲಕನ ಕುಟುಂಬಕ್ಕೆ ₹4 ಲಕ್ಷ ಪರಿಹಾರವನ್ನು ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯಾದವ್‌ ಆದೇಶಿಸಿದ್ದಾರೆ.

ಬುಧವಾರವೇ ಬಾಲಕನ ಅಂತ್ಯಕ್ರಿಯೆಯನ್ನು ಕುಟುಂಬದವರು ನೆರವೇರಿಸಿದರು. ಆದರೆ ಶನಿವಾರ ಬಾಲಕನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಾಲಕನನ್ನು ನೆಲದ ಮೇಲೆ ಆಡಿಕೊಳ್ಳಲು ಬಿಟ್ಟು ತಾಯಿ ಬೇರೆ ಕೆಲಸದಲ್ಲಿ ತೊಡಗಿದ್ದಳು. ಈ ವೇಳೆ ಬೀದಿ ನಾಯಿಗಳು ದಾಳಿ ಮಾಡಿವೆ’ ಎಂದು ಅಯೋಧ್ಯೆ ನಗರದ ಇನ್ಸ್‌ಪೆಕ್ಟರ್ ಮಹೇಶ್ ತಿಳಿಸಿದ್ದಾರೆ.

ಘಟನೆಯ ಬಳಿಕ ಭೋಪಾಲ್‌ನ ಮುನ್ಸಿಪಲ್ ಕಾರ್ಪೊರೇಷನ್ ಅಯೋಧ್ಯೆ ನಗರದಿಂದ ಎಂಟು ಬೀದಿ ನಾಯಿಗಳನ್ನು ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT