ಮುಂಬೈ: ಎರಡು ದಿನಗಳ ಹಿಂದೆಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವಾರ್ಧಾ ನದಿಯಲ್ಲಿ ದೋಣಿ ಮುಳುಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಏಳು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಮೃತರ ಸಂಖ್ಯೆ 10ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ದೋಣಿ ದುರಂತ ಸಂಭವಿಸಿತ್ತು. ದೋಣಿಯಲ್ಲಿ ಒಟ್ಟು 13 ಜನರಿದ್ದರು. ಘಟನೆ ನಡೆದಾಗ ಇಬ್ಬರು ಈಜಿ ಸುರಕ್ಷಿತವಾಗಿ ದಡಸೇರಿದ್ದರು. ಅಂದು ಮೂವರ ಶವಗಳನ್ನು ಹೊರತೆಗೆಯಲಾಗಿತ್ತು. ರಕ್ಷಣಾ ತಂಡದವರು ಇಂದು ಏಳು ಮಂದಿಯ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. 11 ವರ್ಷದ ಬಾಲಕಿಯೊಬ್ಬಳು ಇನ್ನೂ ನಾಪತ್ತೆಯಾಗಿದ್ದಾಳೆ.

ಮೃತಪಟ್ಟವರು ಗಡೆಗಾಂವ್ ನಿವಾಸಿಗಳು. ವಾರ್ಧಾ ತಾಲ್ಲೂಕಿನ ಜಲಪಾತವನ್ನು ವೀಕ್ಷಿಸಿ ದೋಣಿಯಲ್ಲಿ ವಾಪಸಾಗುತ್ತಿದ್ದಾಗ, ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.