ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ನಾಯಿಗೆ ವರ್ಷದ ತಿಥಿ ನೆರವೇರಿಸಿದ ಕುಟುಂಬ

Published 29 ಮೇ 2023, 1:28 IST
Last Updated 29 ಮೇ 2023, 1:28 IST
ಅಕ್ಷರ ಗಾತ್ರ

ಥಾಣೆ: ಮಹಾರಾಷ್ಟ್ರದ ಥಾಣೆಯ ಕುಟುಂಬವೊಂದು ವರ್ಷದ ಹಿಂದೆ ಮೃತಪಟ್ಟ ತಮ್ಮ ಮುದ್ದಿನ ನಾಯಿಯ ಹೆಸರಿನಲ್ಲಿ ದೇವಸ್ಥಾನದಲ್ಲಿ ವರ್ಷದ ತಿಥಿ ನೆರವೇರಿಸುವ ಮೂಲಕ ಶ್ವಾನ ಪ್ರೇಮವನ್ನು ಮೆರೆದಿದೆ.

ಖೋಪಟ್ ನಿವಾಸಿಯಾದ ಕೇತನ್ ಜಾಧವ್ ತಮ್ಮ ನಾಯಿಯ ಶ್ರಾದ್ಧ ನೆರವೇರಿಸಿದ್ದಾರೆ.

ಕೇತನ್ ಸಾಕಿಕೊಂಡಿದ್ದ ಪೊಮೆರೇನಿಯನ್ ನಾಯಿ ಶೆರೂ ವರ್ಷದ ಹಿಂದೆ ಮೃತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕೌಪಿಣೇಶ್ವರ ದೇಗುಲದಲ್ಲಿ ಅರ್ಚಕ ಸಚಿನ್ ಕುಲಕರ್ಣಿ ಅವರ ಮಾರ್ಗದರ್ಶನದಂತೆ ಶ್ರಾದ್ಧ ನೆರವೇರಿಸಲಾಯ್ತು. ಈ ಸಂದರ್ಭ ಕೇತನ್ ಕುಟುಂಬದ ಇತರ ಸದಸ್ಯರು ಸಹ ಹಾಜರಿದ್ದರು.

ಶೆರೂ 15 ವರ್ಷಗಳ ಕಾಲ ನಮ್ಮ ಜೊತೆಗಿತ್ತು. ನಮ್ಮ ಕುಟುಂಬದ ಪ್ರೀತಿಯ ಸದಸ್ಯನಂತಿತ್ತು ಎಂದು ಕುಟುಂಬ ಸದಸ್ಯರಲ್ಲೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT