ಪ್ರಯಾಗ್ರಾಜ್: ಮಹಾಕುಂಭ ಮೇಳ ನಡೆಯುತ್ತಿರುವ ಪ್ರದೇಶದಲ್ಲಿ ಅಸಂಖ್ಯ ಭಕ್ತರು ಜಮಾಯಿಸಿದ್ದು, ಮಾಘಿ ಹುಣ್ಣಿಮೆಯ ಪವಿತ್ರ ಸ್ನಾನವು ಬುಧವಾರ (ಇಂದು) ಮುಂಜಾನೆಯೇ ಆರಂಭವಾಗಿದೆ.

ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಈಗಾಗಲೇ ಲಕ್ಷಾಂತರ ಮಂದಿ ಪುಣ್ಯಸ್ನಾನ ಮಾಡಿದ್ದಾರೆ.

ಮಾಘಿ ಹುಣ್ಣಿಮೆಯ ಪವಿತ್ರ ಸ್ನಾನದೊಂದಿಗೆ 'ಕಲ್ಪವಾಸ್' ಪೂರ್ಣಗೊಳ್ಳಲಿದ್ದು, ಲಕ್ಷಾಂತರ ಕಲ್ಪವಾಸಿಗಳು ಇಂದು ಮಹಾಕುಂಭ ನಗರದಿಂದ ಹೊರಡಲಿದ್ದಾರೆ. ಹೀಗಾಗಿ, ಎಲ್ಲರೂ ಸಂಚಾರ ನಿಯಮಗಳನ್ನು ಪಾಲಿಸಬೇಕು ಹಾಗೂ ಅಧಿಕೃತ ಪಾರ್ಕಿಂಗ್ ಸ್ಥಳಗಳನ್ನಷ್ಟೇ ಬಳಸಬೇಕು ಎಂದು ಆಡಳಿತವು ಮನವಿ ಮಾಡಿದೆ.

ಪುಣ್ಯ ನದಿಯ ತಟದಲ್ಲಿ ನಿರ್ದಿಷ್ಟ ಸಮಯದವರೆಗೆ ನೆಲಸಿ, ಉಪವಾಸದ ಮೂಲಕ ಆತ್ಮದ ಅವಲೋಕನ ಹಾಗೂ ಆಧ್ಯಾತ್ಮಿಕ ಶುದ್ಧೀಕರಣ ಮಾಡಿಕೊಳ್ಳುವ ಪ್ರಕ್ರಿಯೆಗೆ 'ಕಲ್ಪವಾಸ್' ಎನ್ನಲಾಗುತ್ತದೆ. ಮಹಾಕುಂಭಮೇಳದ ಅವಧಿಯಲ್ಲಿ ನಡೆಸುವ 'ಕಲ್ಪವಾಸ್' ಅನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ.

ಪುಣ್ಯಸ್ನಾನಕ್ಕೆ ಅನುಕೂಲವಾಗುವಂತೆ, ವಾಹನಗಳ ದಟ್ಟಣೆ ನಿಯಂತ್ರಿಸಲು ಮಹಾಕುಂಭ ನಗರ ವ್ಯಾಪ್ತಿಯನ್ನು 'ವಾಹನ ಮುಕ್ತ ವಲಯ'ವನ್ನಾಗಿ ಮಾಡಲಾಗಿದೆ.
.ಪ್ರಯಾಗ್ರಾಜ್ | ಮಾಘಿ ಹುಣ್ಣಿಮೆ: ಮಹಾಕುಂಭ ನಗರ ವ್ಯಾಪ್ತಿ ವಾಹನ ಮುಕ್ತ ವಲಯ.ಪ್ರಯಾಗ್ರಾಜ್ ಮಹಾ ಕುಂಭಮೇಳ: ದೇಶದ ಏಕತೆಯ ‘ಮಹಾಯಜ್ಞ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.