ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗ್ಪುರ: ನಾಲ್ಕು ದೇವಾಲಯಗಳಲ್ಲಿ ಭಕ್ತರಿಗೆ ವಸ್ತ್ರಸಂಹಿತೆ ಜಾರಿ

ಮಹಾರಾಷ್ಟ್ರ ಮಂದಿರ ಮಹಾಸಂಘದ ತೀರ್ಮಾನ
Published 27 ಮೇ 2023, 16:23 IST
Last Updated 27 ಮೇ 2023, 16:23 IST
ಅಕ್ಷರ ಗಾತ್ರ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ನಾಲ್ಕು ದೇವಾಲಯಗಳಲ್ಲಿ ಭಕ್ತರಿಗೆ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಮಂದಿರ ಮಹಾಸಂಘವು (ರಾಜ್ಯ ದೇವಾಲಯಗಳ ಒಕ್ಕೂಟ) ತಿಳಿಸಿದೆ. 

‘ಮೇ 26ರಿಂದಲೇ ಧಾಂತೋಳಿಯ ಗೋಪಾಲಕೃಷ್ಣ ದೇವಾಲಯ, ಬೆಳ್ಳೂರಿನ ಸಂಕತ್ಮೋಚನ ಪಂಚಮುಖಿ ಹನುಮಾನ್ ದೇವಾಲಯ (ಸಾಯೋನೆರ್‌), ಕನೋಲಿಬರದ ಬೃಹಸ್ಪತಿ ದೇವಾಲಯ ಮತ್ತು ನಾಗ್ಪುರ ನಗರದ ಹಿಲ್‌ಟಾಪ್ ಪ್ರದೇಶದ ದುರ್ಗಾಮಾತಾ ದೇವಾಲಯದಲ್ಲಿ ಭಕ್ತರಿಗೆ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಸಂಘವು ಮಹಾರಾಷ್ಟ್ರದ ಎಲ್ಲಾ ದೇವಾಲಯಗಳಲ್ಲೂ ವಸ್ತ್ರಸಂಹಿತೆ ಜಾರಿಗೊಳಿಸಲು ಮುಂದಾಗಿದೆ’ ಎಂದು ಸಂಘದ ಸಂಯೋಜಕ ಸುನೀಲ್ ಘನವತ್ ತಿಳಿಸಿದ್ದಾರೆ.

‘ಭಕ್ತರು ಯಾವುದೇ ರೀತಿಯ ಆಕ್ಷೇಪಾರ್ಹವಾದ ಉಡುಪುಗಳನ್ನು ಧರಿಸಬಾರದು ಎಂಬುದನ್ನು ಫೆಬ್ರುವರಿಯಲ್ಲಿ ಜಲಗಾಂವ್‌ನಲ್ಲಿ ನಡೆದ ಮಹಾರಾಷ್ಟ್ರ ದೇವಾಲಯ ಟ್ರಸ್ಟ್ ಕೌನ್ಸಿಲ್ ಸಭೆಯ ಬಳಿಕ ನಿರ್ಧರಿಸಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

‘ದೇವಾಲಯಗಳ ಪಾವಿತ್ರ್ಯವನ್ನು ರಕ್ಷಿಸುವುದು ಪ್ರಾಥಮಿಕ ಉದ್ದೇಶವಾಗಿದ್ದು, ಇಂತಹ ನಿಯಮಗಳು ಅನೇಕ ದೇವಾಲಯಗಳಲ್ಲಿ ಈಗಾಗಲೇ ಜಾರಿಯಲ್ಲಿವೆ. ಸರ್ಕಾರದ ನಿಯಂತ್ರಣದಲ್ಲಿರುವ ದೇವಾಲಯಗಳಲ್ಲೂ ವಸ್ತ್ರಸಂಹಿತೆ ನಿಯಮವನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೂ ಮನವಿ ಮಾಡಲಾಗುವುದು’ ಎಂದು ಘನವತ್ ಹೇಳಿದ್ದಾರೆ. 

ರಾಜ್ಯದ ಸುಪ್ರಸಿದ್ಧ ತುಳಜಾ ಭವಾನಿ ದೇವಸ್ಥಾನದಲ್ಲಿ ಶಾರ್ಟ್ಸ್ ಮತ್ತು  ಬರ್ಮುಡಾ ಧರಿಸುವುದನ್ನು ನಿಷೇಧಿಸಲು ಪ್ರಯತ್ನಿಸಲಾಗಿತ್ತು. ಆದರೆ, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಕಾರಣ, ಕೆಲವೇ ಗಂಟೆಗಳಲ್ಲಿ ಆ ಆದೇಶವನ್ನು ಹಿಂದಕ್ಕೆ ಪಡೆಯಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT