ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಮರಾಠಿಯಲ್ಲಿ ಉನ್ನತ ಶಿಕ್ಷಣ: ಸಚಿವ ಕೇಸರ್‌ಕರ್‌

Published 12 ಜುಲೈ 2023, 14:28 IST
Last Updated 12 ಜುಲೈ 2023, 14:28 IST
ಅಕ್ಷರ ಗಾತ್ರ

ಠಾಣೆ: ಮರಾಠಿ ಭಾಷೆಯಲ್ಲಿ ಉನ್ನತ ಶಿಕ್ಷಣ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಶಿಕ್ಷಣ ಸಚಿವ ದೀಪಕ್‌ ಕೇಸರ್‌ಕರ್‌ ಬುಧವಾರ ತಿಳಿಸಿದರು.

ಮರಾಠಿ ಉದ್ಯಮಿಗಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಈ ವರ್ಷ ಮರಾಠಿ ಭಾಷೆಯಲ್ಲಿ ಎಂಜಿಯರಿಂಗ್ ಪದವಿ ಆರಂಭಿಸಿದೆ ಮತ್ತು ಮುಂದಿನ ವರ್ಷ ಇದನ್ನು ವೈದ್ಯಕೀಯ ಶಿಕ್ಷಣಕ್ಕೂ ವಿಸ್ತರಿಸಲಿದೆ ಎಂದು ಹೇಳಿದರು.

ಹಲವು ದೇಶಗಳು ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿವೆ. ವಾಸ್ತವದಲ್ಲಿ ಅದೇ ಸರಿಯಾದ ವಿಧಾನ ಎಂದು ಅಭಿಪ್ರಾಯಪಟ್ಟರು.

ಉದ್ಯಮಿಗಳನ್ನು ಉದ್ದೇಶಿಸಿ, ‘ನೀವೆಲ್ಲರೂ ಉದ್ಯೋಗ ಹುಡುಕುವವರಲ್ಲ, ಸೃಷ್ಟಿಸುವವರಾಗಬೇಕು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೇಶ ಹೆಮ್ಮೆ ಪಡುವ ಕೆಲಸ ಮಾಡಿ’ ಎಂದರು.

ಜರ್ಮನಿಯು ನಾಲ್ಕು ಲಕ್ಷ ಉದ್ಯೋಗ ನೀಡುವುದಾಗಿ ತಿಳಿಸಿದೆ, ಮಹಾರಾಷ್ಟ್ರ ಅದರ ಅಗತ್ಯವನ್ನು ಪೂರೈಸಲಿದೆ. ಸರಕುಗಳು ಮಾತ್ರ ರಫ್ತಾಗಬಾರದು, ಮಾನವ ಶಕ್ತಿಯೂ ರಫ್ತಾಗಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT