ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಡಿಶಾದ ಬಗ್ಗೆ ಮಮತಾ ಅವರಿಂದ ದ್ವೇಷಪೂರಿತ ಹೇಳಿಕೆ: ಮೋಹನ್‌ ಚರಣ್‌ ಮಾಝಿ

Published : 29 ಆಗಸ್ಟ್ 2024, 8:41 IST
Last Updated : 29 ಆಗಸ್ಟ್ 2024, 8:41 IST
ಫಾಲೋ ಮಾಡಿ
Comments

ಭುವನೇಶ್ವರ: ರಾಜ್ಯದ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಕಾರಾತ್ಮಕ ಮತ್ತು ದ್ವೇಷಪೂರಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ ಆರೋಪಿಸಿದ್ದಾರೆ.

‘ಕೋಲ್ಕತ್ತದ ಆರ್‌.ಜಿ ಕರ್‌ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಮಾಝಿ, ‘ಆಸ್ಪತ್ರೆಯಲ್ಲಿ ನಡೆದ ಹೇಯ ಕೃತ್ಯದಲ್ಲಿನ ಸಂತ್ರಸ್ತೆಗೆ ನ್ಯಾಯ ನೀಡದೆ, ಸಿಎಂ ಮಮತಾ ಬ್ಯಾನರ್ಜಿ ಅವರು ಸೇಡು ತೀರಿಸಿಕೊಳ್ಳುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ’ ಎಂದು ಹೇಳಿದ್ದಾರೆ.

‘ಒಡಿಶಾ ಶಾಂತಿಯುತ ರಾಜ್ಯವಾಗಿದೆ. ಅಲ್ಲಿನ ಜನರು ಜವಾಬ್ದಾರಿಯುತರಾಗಿದ್ದಾರೆ. ಒಡಿಶಾದ ಬಗ್ಗೆ ನಕಾರಾತ್ಮಕ, ವಿಭಜಕ ಮತ್ತು ಸಂವೇದನಾಶೀಲ ಟೀಕೆಗಳನ್ನು ಮಾಡಲು ನಿಮಗೆ ಯಾರು ಅಧಿಕಾರ ನೀಡಿದ್ದಾರೆ?. ರಾಜ್ಯದ ಕುರಿತು ಇಂತಹ ದ್ವೇಷಪೂರಿತ, ನಕಾರಾತ್ಮಕ ಟೀಕೆ ಮತ್ತು ಸಂವೇದನಾಶೀಲ ಧೋರಣೆಗಳನ್ನು ಒಡಿಶಾದ ಜನರು ಸ್ವೀಕರಿಸುವುದಿಲ್ಲ’ ಎಂದು ಮಾಝಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಆಸ್ಪತ್ರೆಯಲ್ಲಿ ನಡೆದ ಹೇಯ ಕೃತ್ಯದ ಸಂತ್ರಸ್ತರಿಗೆ ನ್ಯಾಯ ನೀಡದೆ, ಸೇಡಿನ ಕಾಮೆಂಟ್‌ಗಳನ್ನು ಮಾಡುತ್ತಿರುವುದು ದೇಶಕ್ಕೆ ಅಪಾಯಕಾರಿಯಾಗಿದೆ. ಆದ್ದರಿಂದ ಈ ರೀತಿಯ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲು ಒತ್ತಾಯಿಸುತ್ತೇನೆ ಎಂದು ಮಮತಾ ಬ್ಯಾನರ್ಜಿಗೆ ಮಾಝಿ ಆಗ್ರಹಿಸಿದ್ದಾರೆ.

ಬುಧವಾರ ಕೋಲ್ಕತ್ತದ ಟಿಎಂಸಿ ವಿದ್ಯಾರ್ಥಿಗಳ ವಿಭಾಗದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ‘ಬಂಗಾಳಕ್ಕೆ ಬೆಂಕಿ ಹಚ್ಚಿದರೆ, ಅಸ್ಸಾಂ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌, ಒಡಿಶಾ ಮತ್ತು ದೆಹಲಿಗೂ ಕೂಡ ಪರಿಣಾಮ ಬೀರುತ್ತದೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT