ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಪ್ರವಾಹ: ನದಿಯ ಕಸವ ನದಿಗೇ ಚೆಲ್ಲಿ!

Last Updated 19 ಆಗಸ್ಟ್ 2018, 4:09 IST
ಅಕ್ಷರ ಗಾತ್ರ

ಜಲಪ್ರಳಯದಿಂದ ನಲುಗುತ್ತಿರುವ ಕೇರಳದಲ್ಲಿ ನದಿ, ಕೆರೆಗಳು ಬೋರ್ಗರೆಯುತ್ತ ತಮ್ಮಒಡಲಲ್ಲಿ ಹತ್ತಾರು ವರ್ಷಗಳಿಂದ ತುಂಬಿಕೊಂಡಿದ್ದತ್ಯಾಜ್ಯವನ್ನು ಮೇಲೆತ್ತಿ ತೂರಿವೆ.ಮಲಯತ್ತೂರ್‌ ಕೊಡನಾಡಿನ ಸೇತುವೆ ಮೇಲೆ ಪ್ಲಾಸ್ಟಿಕ್‌ ಬಾಟಲಿಗಳು, ಇತರೆ ಕಸದ ರಾಶಿ ಪದರ ತುಂಬಿದೆ. ಇದರ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಪರಿಸರ ಕಾಳಜಿಯ ಚರ್ಚೆಗಳಿಗೆ ಕೇಂದ್ರವಾಗಿದೆ.

ಕೇರಳದ ಹಲವು ಭಾಗಗಳಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ, ಮಲಯತ್ತೂರಿನಲ್ಲಿ ಪ್ರವಾಹ ಹೊತ್ತು ತಂದ ಕಸವೇ ಸಂಚಾರಕ್ಕೆ ತಡೆಯಾಗಿದೆ. ಪ್ಲಾಸ್ಟಿಕ್‌ ಮತ್ತು ಇತರೆ ತ್ಯಾಜ್ಯ ಕಣ್ಣ ಮುಂದಿದೆ, ಪರಿಸರ ಕಾಳಜಿ ಜವಾಬ್ದಾರಿ ಮುಂದಿದೆ. ಅದೇ ಸಮಯದಲ್ಲಿ ಜನರ ಜೀವ, ಜೀವನ ಹಾಗೂ ಸಂಪರ್ಕದ ಅನಿವಾರ್ಯತೆಯೂ ಕಾಡುತ್ತಿದೆ. ಅಲ್ಲಿನ ಆಡಳಿತ ಜೆಸಿಬಿ ಮೂಲಕ ಸೇತುವೆ ಮೇಲೆ ತುಂಬಿರುವ ತ್ಯಾಜ್ಯವನ್ನು ಮತ್ತೆ ಪೆರಿಯಾರ್‌ ನದಿಗೆ ಸುರಿಯುತ್ತಿದೆ.

ಮತ್ತದೇ ತ್ಯಾಜ್ಯ ಹರಿಯುವ ನದಿಯೊಂದಿಗೆ ಮತ್ತೊಂದು ಊರಿನ ಇನ್ನಾವುದೋ ಸೇತುವೆಯ ಮೇಲೇಳಲು ಸಾಗುತ್ತಿದೆ...

(‍ಪ್ರವಾಹಕ್ಕೂ ಮುನ್ನ ಮಲಯತ್ತೂರ್‌ ಕೊಡನಾಡಿನ ಸೇತುವೆ)

ಟ್ವಿಟರ್‌ ಪ್ರತಿಕ್ರಿಯೆಗಳು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT