ಕೋಯಿಕ್ಕೋಡ್: ಮಾಜಿ ಪತ್ನಿಯನ್ನು ಬೆನ್ನಟ್ಟಿ ಆ್ಯಸಿಡ್ ದಾಳಿ ನಡೆಸಿದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಜಿಲ್ಲೆಯ ನಡುವಣ್ಣೂರಿನ ನಿವಾಸಿ ಪ್ರಶಾಂತ್ ಎಂದು ಗುರುತಿಸಲಾಗಿದೆ.

ಸಂತ್ರಸ್ತೆಗೆ ಮೂರು ವರ್ಷಗಳ ಹಿಂದೆಯೇ ಆರೋಪಿ ವಿಚ್ಛೇದನ ನೀಡಿದ್ದ, ಹೀಗಾಗಿ ಪ್ರಭೀಷಾ (29) ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಾಳೆ.
.ಒತ್ತಡಕ್ಕೆ ಮಣಿದು ಬಂಡಿಪುರ ರಾತ್ರಿ ಸಂಚಾರ ನಿಷೇಧ ತೆರವಿಗೆ ಮುಂದಾದ ಸರ್ಕಾರ: BJP.ಅಮೆರಿಕ: ವಿಶ್ವ ಒಕ್ಕಲಿಗರ ಸಮ್ಮೇಳನ ಜುಲೈ 3ರಿಂದ.
ನಿನ್ನೆ (ಭಾನುವಾರ) ಪ್ರಭೀಷಾ ಪೆರಂಬ್ರಾದ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಈ ವೇಳೆ ಆಸ್ಪತ್ರೆಯ ಬಳಿ ಬಂದಿದ್ದ ಮಾಜಿ ಪತಿ, ಆಕೆಯನ್ನು ಬೆನ್ನಟ್ಟಿ ಆಸಿಡ್ ದಾಳಿ ನಡೆಸಿದ್ದಾನೆ. ಆಕೆ ಎಷ್ಟೇ ಪ್ರಯತ್ನಿಸಿದರೂ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮಹಿಳೆಯ ಮುಖ ಮತ್ತು ಎದೆಯ ಮೇಲೆ ಸುಟ್ಟ ಗಾಯಗಳಾಗಿವೆ. ಸಂತ್ರಸ್ತೆ, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
.ಒತ್ತಡಕ್ಕೆ ಮಣಿದು ಬಂಡಿಪುರ ರಾತ್ರಿ ಸಂಚಾರ ನಿಷೇಧ ತೆರವಿಗೆ ಮುಂದಾದ ಸರ್ಕಾರ: BJP.ದತ್ತಾಂಶ ಆಧರಿಸಿ ಒಳಮೀಸಲಾತಿ ನೀಡಿ: ಮಹದೇವ ಧನ್ನಿ ಒತ್ತಾಯ.ಸರ್ಕಾರಿ ನೌಕರರಿಗೆ ‘ಸಂಬಳ ಪ್ಯಾಕೇಜ್’ ಖಾತೆ ಕಡ್ಡಾಯ.ಇನ್ನೆರಡು ದಿನದಲ್ಲಿ ಮಧುಬಲೆ ಪ್ರಕರಣ ತನಿಖೆ: ಸಚಿವ ಚಲುವರಾಯಸ್ವಾಮಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.