ಗುರುಗ್ರಾಮ್(ಹರಿಯಾಣ): ನಿಷೇಧಿತ ವಿದೇಶಿ ಇ-ಸಿಗರೇಟ್ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗುರುವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಲ್ಲಿನ ಸುಶಾಂತ್ ಲೋಕ್ ಫೇಸ್-1 ಪ್ರದೇಶದ ವ್ಯಾಪಾರ ಕೇಂದ್ರದಲ್ಲಿರುವ ಅಂಗಡಿ ಮೇಲೆ ಡ್ರಗ್ ಕಂಟ್ರೋಲರ್ ಇಲಾಖೆ ಮತ್ತು ಸ್ಥಳೀಯ ಪೊಲೀಸರನ್ನೊಳಗೊಂಡ ತಂಡ ಜಂಟಿ ಕಾರ್ಯಾಚರಣೆ ನಡೆಸಿದೆ. ಈ ವೇಳೆ ₹7 ರಿಂದ ₹10 ಲಕ್ಷ ಮೌಲ್ಯದ ವಿದೇಶಿ ಸಿಗರೇಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು ದೆಹಲಿಯ ಖಾನ್ಪುರ ನಿವಾಸಿ ರಾಜೇಶ್(50) ಎಂದು ಗುರುತಿಸಲಾಗಿದೆ.

ವಿವಿಧ ಬ್ರಾಂಡ್ಗಳ ಇ-ಸಿಗರೇಟ್ಗಳ ಬೃಹತ್ ಪ್ಯಾಕೆಟ್ಗಳು ಮತ್ತು ವಿದೇಶಿ ಸಿಗರೇಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

‘ಅನುಮತಿ ಇಲ್ಲದೆ ಅಕ್ರಮವಾಗಿ ಇ-ಸಿಗರೇಟ್ ಮತ್ತು ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನಿಷೇಧಿತ ಸಿಗರೇಟ್ಗಳ ಸಮೇತ ಆರೋಪಿಯನ್ನು ಬಂಧಿಸಿದ್ದೇವೆ’ ಎಂದು ಅಧಿಕಾರಿ ಹರೀಶ್ ಹೇಳಿದ್ದಾರೆ.

ಆರೋಪಿಯು ದೆಹಲಿಯಿಂದ ನಿಷೇಧಿತ ಸಿಗರೇಟ್ಗಳನ್ನು ತಂದು ಕಳೆದ ಆರು ತಿಂಗಳಿನಿಂದ ಅಕ್ರಮ ದಂಧೆ ನಡೆಸುತ್ತಿದ್ದನು. ಅಂಗಡಿಗೆ ಮಾಸಿಕ ₹25 ಸಾವಿರ ಬಾಡಿಗೆ ನೀಡುತ್ತಿದ್ದರು. ಈ ಪ್ರಕರಣ ಸಂಬಂಧ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ ಮತ್ತು ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆಯಡಿ ರಾಜೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇವನ್ನೂ ಓದಿ: ಎರಡು ಮದುವೆ ಅವಾಂತರ: ಪತಿ ಜೊತೆ ತಲಾ ಮೂರು ದಿನ ವಾಸಿಸಲು ಪತ್ನಿಯರಿಬ್ಬರ ನಿರ್ಧಾರ

ಅರುಣಾಚಲ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್ ಸಾವು

ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.