ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ: ಕೂಲಿ ಹಣ ಕೊಡದ ಮಾಲೀಕನನ್ನೇ ಕೊಂದ ಕೆಲಸಗಾರ

Published 16 ಜೂನ್ 2024, 2:44 IST
Last Updated 16 ಜೂನ್ 2024, 2:44 IST
ಅಕ್ಷರ ಗಾತ್ರ

ಥಾಣೆ: ಕೂಲಿ ಹಣ ಕೊಡದ ಕಾರಣ ಮಾಲೀಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಕಲಾಂಬೊಲಿ ಪೊಲೀಸ್‌ ಠಾಣಾಧಿಕಾರಿಗಳು ತಿಳಿಸಿದ್ದಾರೆ.

'ಮಾಲೀಕ ಪರ್ವೇಜ್‌ ಅನ್ಸಾರಿ ಬಳಿ ಶುಕ್ರವಾರ ಹೋಗಿದ್ದ ಆರೋಪಿಯು, ತನ್ನ ಕೂಲಿ ಹಣ ₹ 1,250 ಅನ್ನು ಕೊಡುವಂತೆ ಕೇಳಿದ್ದ. ಈ ವೇಳೆ ಅನ್ಸಾರಿ, ಜೂನ್‌ 20ರಂದು ಕೊಡುವುದಾಗಿ ಹೇಳಿದ್ದ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಆಗ ಆರೋಪಿಯು ಅನ್ಸಾರಿ ಮೇಲೆ ದಾಳಿ ಮಾಡಿದ್ದಾನೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT