ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಛತ್ತೀಸಗಢ: ಕಚ್ಚಾ ಬಾಂಬ್ ಸ್ಫೋಟಿಸಿ ಯುವಕನಿಗೆ ಗಾಯ

Published 2 ಜೂನ್ 2024, 13:16 IST
Last Updated 2 ಜೂನ್ 2024, 13:16 IST
ಅಕ್ಷರ ಗಾತ್ರ

ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಕಚ್ಚಾಬಾಂಬ್ ಸ್ಫೋಟಿಸಿದ್ದರಿಂದ 22 ವರ್ಷದ ಯುವಕರೊಬ್ಬರು ಭಾನುವಾರ ಗಾಯಗೊಂಡಿದ್ದಾರೆ. ನಕ್ಸಲರು ಈ ಬಾಂಬ್ ಇಟ್ಟಿರಬಹುದು ಎಂಬ ಶಂಕೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಛುಟವೈ ಗ್ರಾಮದ ಮಾದ್ವಿ ನಂದಾ ಎಂಬ ಯುವಕರೊಬ್ಬರು ಟ್ರ್ಯಾಕ್ಟರ್‌ನಲ್ಲಿ ತರೇಮ್‌ ಎಂಬಲ್ಲಿಗೆ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆಂದು ಇಳಿದು ಸಾಗುವಾಗ ಕಚ್ಚಾ ಬಾಂಬ್ ಹೂತಿಟ್ಟಿದ್ದ ಜಾಗದಲ್ಲಿ ಅಕಸ್ಮಾತ್‌ ಹೆಜ್ಜೆ ಇಟ್ಟರು. ಹೀಗಾಗಿ ಬಾಂಬ್ ಸ್ಫೋಟಿಸಿ, ಗಾಯಗೊಂಡರು. ಅವರ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಭದ್ರತಾ ಸಿಬ್ಬಂದಿಯನ್ನೊಳಗೊಂಡ ತಂಡವು ಗಾಯಾಳುವನ್ನು ಚಿನ್ನಾಗೆಲೂರ್‌ ಶಿಬಿರಕ್ಕೆ ಮೊದಲು ಕರೆತಂದು, ಪ್ರಥಮ ಚಿಕಿತ್ಸೆ ನೀಡಿತು. ನಂತರ ಬಿಜಾಪುರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT